ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶೇಖಪ್ಪ ಪಲ್ಲೇದ ಕಾಂಗ್ರೆಸ್ ಸೇರ್ಪಡೆ

Rashmi Kasaragodu
Updated On : 24 Apr 2013, 11:04 am

ರೋಣ: ಪಟ್ಟಣದ ಬಿಜೆಪಿ ಮುಖಂಡ ಶೇಖಪ್ಪ ಪಲ್ಲೇದ ಹಾಗೂ ಅಂದಪ್ಪ ಬೇನಾಳ, ರಾಮಪ್ಪ ಹಲಗಿ ರೋಣ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಐ.ಎಸ್. ಪಾಟೀಲ ಸಮ್ಮುಖದಲ್ಲಿ ಗುರುವಾರ ಕಾಂಗ್ರೆಸ್ ಸೇರ್ಪಡೆಯಾದರು.  ಐ.ಎಸ್. ಪಾಟೀಲ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ನಿತ್ಯ ನೂರಾರು ಬಿಜೆಪಿ ಹಾಗೂ ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ತತ್ವ, ಸಿದ್ಧಾಂತ ಮತ್ತು ರೈತ, ಜನಪರ ಕಾಳಜಿ ಕಂಡು ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿಯಿಂದ ಕ್ಷೇತ್ರ ಮತ್ತು ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿರುವುದರಿಂದ ಬೇಸತ್ತು ಜನ ಕಾಂಗ್ರೆಸ್ ಸೇರುತ್ತಿದ್ದಾರೆ ಸಹೋದರ ಮಾಜಿ ಶಾಸಕ ಜಿ.ಎಸ್. ಪಾಟೀಲ ಬಹುಮತದಿಂದ ಗೆಲವು ಸಾಧಿಸುವುದರಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಡಾ. ಪ್ರಶಾಂತ ಪಾಟೀಲ ಮಾತನಾಡಿದರು.  ಮಿಥುನ್ ಪಾಟೀಲ, ಪರಶುರಾಮ ಅಳಗವಾಡಿ, ದಶರಥ ಗಾಣಿಗೇರ, ವಿಜಯಗೌಡ ಪಾಟೀಲ, ಸಂಗು ನವಲಗುಂದ, ಕೆ.ಕೆ. ಮುಲ್ಲಾ, ಸುರೇಶ ಜಗ್ಗಲ, ಅಪ್ಪು ಗಿರಡ್ಡಿ, ಮಂಜುನಾಥ ಹಾಳಕೇರಿ ಮುಂತಾದವರು ಉಪಸ್ಥಿತರಿದ್ದರು.
ಮತದಾನ ಜಾಗೃತಿ: ಬೀದಿ ನಾಟಕ ಪ್ರದರ್ಶನ
ಲಕ್ಷ್ಮೇಶ್ವರ: ಮತದಾನ ಜಾಗೃತಿಗಾಗಿ ರಾಜ್ಯ ಚುನಾವಣಾ ಆಯೋಗ ಹಾಗೂ ಗದಗ ಜಿಲ್ಲಾ ಪಂಚಾಯಿತಿ ವತಿಯಿಂದ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾ ತಂಡ, ರೋಣ ತಾಲೂಕಿನ ಕೊತಬಾಳದ ಅರುಣೋದಯ ಕಲಾ ತಂಡದವರು ಬೀದಿ ನಾಟಕ ಪ್ರದರ್ಶಿಸಿದರು. ಮತದಾನ ಪವಿತ್ರ ಕಾರ್ಯವಾಗಿದ್ದು, ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಮತದಾನದಲ್ಲಿ ಭಾಗವಹಿಸಿ, ನಿಮ್ಮ ಅಮೂಲ್ಯ ಮತವನ್ನು ಚಲಾಯಿಸಬೇಕು. ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನಿಮಗಿದೆ ಎಂದು ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.  12 ಜನರ ಬೀದಿ ನಾಟಕ ತಂಡವು ಮತದಾನವನ್ನು ಯಾಕೆ ಮಾಡಬೇಕು, ಮತದಾನದಿಂದ ಪ್ರಯೋಜನೆಗಳೇನು, ಹೇಗೆ ಮತ ಚಲಾಯಿಸಬೇಕು, ನಿರ್ಭಿತಿಯಿಂದ ಮತಚಲಾಯಿಸಬೇಕು. ಆಸೆ ಆಮೀಷಗಳಿಗೆ ಬಲಿಯಾಗದೇ ಮತ ನೀಡಬೇಕು. ನಿಮ್ಮ ದೇಶದ ಭದ್ರ ಭವಿಷ್ಯಕ್ಕಾಗಿ ಮತ ಚಲಾಯಿಸಬೇಕು ಎನ್ನುವುದನ್ನು ನಾಟಕದ ಮೂಲಕ ಜನರ ಮುಂದೆ ಅಭಿನಯಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು. ಲಕ್ಷ್ಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ವಿ.ಬಿ. ಬೂದಿಹಾಳ, ಸಮನ್ವಯಾಧಿಕಾರಿ ಬಿ.ಎನ್. ಮೊಸರಕಟ್ಟಿ, ಬಿ. ಮಂಜುನಾಥ, ಎನ್.ಎಂ. ಬೂದಿಹಾಳ ಇತರರಿದ್ದರು.
ಚಿಣ್ಣರ ಅಂಗಳ
ಗಜೇಂದ್ರಗಡ: ಮಕ್ಕಳಲ್ಲಿ ಶಿಕ್ಷಣದ ಹಕ್ಕಿನ ಕುರಿತು ಜಾಗೃತಿ ಮೂಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಶಿಕ್ಷಕ ಸಮುದಾಯದ ಜತೆ ಕೈಜೋಡಿಸಬೇಕೆಂದು ಮುಖ್ಯೋಪಾಧ್ಯಾಯ ರಾಮಮೂರ್ತಿ ಜೋಶಿ ಹೇಳಿದರು.
ಈಚೆಗೆ ಅವರು ಸಮೀಪದ ಕೊಡಗಾನೂರ ಗ್ರಾಮದ ಸರ್ಕಾರಿ ಎಚ್.ಪಿ.ಎಸ್. ಶಾಲೆಯಲ್ಲಿ ನಡೆದ ಚಿಣ್ಣರ ಅಂಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಿಲಿ-ಪಿಲಿ ಚಿಣ್ಣರ ಅಂಗಳ ಶಿಕ್ಷಣ ಮಕ್ಕಳಿಗೆ ಮನರಂಜನೆ ಜತೆಗೆ ಅಕ್ಷರ ಜ್ಞಾನ ಸಂಪಾದಿಸಲು ಸಹಕಾರಿಯಾಗಿದೆ.  ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ರೂಪಿಸಿ ಕಾರ್ಯರೂಪಕ್ಕೆ ತರುವ ಮೂಲಕ ರಾಷ್ಟ್ರದ ಸರ್ವರನ್ನು ಸಾಕ್ಷರರನ್ನಾಗಿಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದರು. ಬಸವರಾಜ ರಾಮಜಿ, ಬಾಲಚಂದ್ರ ವಾಲ್ಮೀಕಿ ಮುಂತಾದವರು ಯೋಜನೆಯ ಕುರಿತು ಮಾತನಾಡಿದರು. ಶಾಲಾ ಮ್ಕಕಳು ವಿವಿಧ ಸಾಂಸ್ಕೃತಿಕ ಚಟುವಟಿಕೆ ಪ್ರದರ್ಶಿಸಿದ್ದಲ್ಲದೇ ಚಿಣ್ಣರ ಅಂಗಳ ಶಿಬಿರದ ಕಾರ್ಯಕ್ರಮದಲ್ಲಿ ಶಾಲೆ ಬಿಟ್ಟ ಮಕ್ಕಳು ಭಾಗವಹಿಸಿದ್ದರು. ಅಲ್ಲಾಸಾಬ ನದಾಫ ಇತರರಿದ್ದರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement