ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಲ್ಪಸಂಖ್ಯಾತರ ಹಿತಕ್ಕಾಗಿ ಕೆಜೆಪಿ ಬೆಂಬಲಿಸಿ: ಸಂಕಣ್ಣವರ

Rashmi Kasaragodu
Updated On : 25 Apr 2013, 11:47 am

ಗದಗ: ಕೆಜೆಪಿಗೆ ಮತ ಹಾಕಿದರೆ ಅಲ್ಪಸಂಖ್ಯಾತರಿಗೆ ಇನ್ನಷ್ಟು ಹಿತಕಾರಿ ಯೋಜನೆಗಳ ನೆರವು ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಕೆಜೆಪಿ ಸರ್ಕಾರದಿಂದ ಖಂಡಿತ ಮುಂದುವರಿಯಲಿದೆ ಎಂದು ಗದಗ ವಿಧಾನಸಭೆ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಸ್.ಬಿ. ಸಂಕಣ್ಣವರ ಹೇಳಿದರು. ನಗರದ ಗಂಗಿಮಡಿ ಭಾಗದಲ್ಲಿ ನಡೆದ ಅಲ್ಪಸಂಖ್ಯಾತರ ಸಭೆಯಲ್ಲಿ ಪಾಲ್ಗೊಂಡ ಅವರು, ಯಡಿಯೂರಪ್ಪ ಅದೃಷ್ಟವಶಾತ್ ಮುಖ್ಯಮಂತ್ರಿ ಆದವರಲ್ಲ. ತಮ್ಮ ಜೀವನದ ಬಹುಭಾಗವನ್ನು ನ್ಯಾಯಯುತ ಹೋರಾಟ, ಜಾಗೃತಿ, ಜನರ ಸಮಸ್ಯೆಗಳ ಪರಿಹಾರಕ್ಕೆ ದುಡಿವ ಛಲದೊಂದಿಗೆ ಬೆಳೆದು ಬಂದವರು. ಅವರು ಮುಖ್ಯಮಂತ್ರಿಯಾದ ಮೇಲೆ ರಾಜ್ಯದ ಸರ್ವಾಂಗೀಣ ಪ್ರಗತಿಗೆ, ಅಲ್ಪಸಂಖ್ಯಾತರು, ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸುವುದನ್ನು ಕಂಡು ಅವರ ಬೆನ್ನಿಗೆ ಚೂರಿ ಹಾಕಿ ಅಧಿಕಾರದಿಂದ ಕೆಳಗಿಳಿಸಲಾಯಿತು ಎಂದರು. ಆದರೆ ಯಡಿಯೂರಪ್ಪ ಧೃತಿಗೆಡದೆ ಬಿಜೆಪಿಗೆ ಪರ್ಯಾಯವಾಗಿ ಕೆಜೆಪಿ ಸ್ಥಾಪಿಸಿ ರಾಜ್ಯದ ಸ್ವಾವಲಂಬನೆ ಹಾಗೂ ಅಭಿವೃದ್ಧಿಗೆ ಕಾಯಕಲ್ಪ ನೀಡಿದರು. ಈ ಚುನಾವಣೆಯಲ್ಲಿ ಮತ್ತೆ ಯಡಿಯೂರಪ್ಪ ಶಕ್ತಿ ಬಲಪಡಿಸುವಂತೆ ಕೋರಿದರು. ಕೆಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ರಜಾಕ ಡಂಕೇದ ಮಾತನಾಡಿದರು. ವಿಕ್ರಾಂತ ಅಬ್ಬಿಗೇರಿ, ಇರ್ಷಾದ ಮಾನ್ವಿ, ಸಯ್ಯದ ಖಾಲಿದ ಕೊಪ್ಪಳ, ಸದಾಶಿವ ಮದರಿಮಠ, ಜಿಲ್ಲಾ ಕಾರ್ಯದರ್ಶಿ ಸಿದ್ದು ಪಲ್ಲೇದ, ಸಂಗಣ್ಣ ಬಂಗಾರಶೆಟ್ರ, ಅಶೋಕ ಸಂಕಣ್ಣವರ, ಕೆಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಅಂಗಡಿ, ಪೂಜಾ ಬೇವೂರ, ಶ್ರೀನಿವಾಸ ಹುಬ್ಬಳ್ಳಿ, ಅಮರೇಶ ಅಂಗಡಿ, ಕೆ.ಪಿ. ಗುಳಗೌಡ್ರ ಉಪಸ್ಥಿತಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement