ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಿ.ಸಿ. ಪಾಟೀಲ ಪರ ಸಂಸದ ಗದ್ದಿಗೌಡ್ರ ಬಿರುಸಿನ ಪ್ರಚಾರ

Rashmi Kasaragodu
Updated On : 25 Apr 2013, 11:47 am

ಕನ್ನಡಪ್ರಭ ವಾರ್ತೆ, ಗದಗ, ಏ. 24
ಗುಜರಾತದಲ್ಲಿ ಸಿಎಂ ಮೋದಿಯವರು ರಾಜ್ಯವನ್ನು ಅಭಿವೃದ್ಧಿಪಡಿಸಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತಂದಂತೆ ರಾಜ್ಯದಲ್ಲಿಯೂ ಜನ ಅಭಿವೃದ್ಧಿ ಕೆಲಸ ಅವಲೋಕಿಸಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುತ್ತಾರೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಬುಧವಾರ ತಾಲೂಕಿನ ಹುಯಿಲಗೋಳ, ಹಿರೇಕೊಪ್ಪ, ಚಿಕ್ಕೊಪ್ಪ, ನರಸಾಪೂರ, ನಾಗಸಮುದ್ರ, ಬೆನಕೊಪ್ಪ, ನಾಗರಾಳ, ನೀರಲಗಿ ಗ್ರಾಮಗಳಲ್ಲಿ ನರಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲರ ಪ್ರಚಾರಾರ್ಥವಾಗಿ ಜರುಗಿದ ಸಭೆಯಲ್ಲಿ ಮಾತನಾಡಿದರು.
ಕರ್ನಾಟದಲ್ಲಿ ಬಿಜೆಪಿ ಅಲೆ ಎದ್ದಿದೆ. ಈ ಬಾರಿಯೂ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿಯಾಗುವುದು ಖಚಿತವಾಗಿದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ ಸಿ.ಸಿ.ಪಾಟೀಲರ ಗೆಲುವು ಖಚಿತ ಎಂದರು.
ವಿಧಾನ ಪರಿಷತ್ ಸದಸ್ಯ ಜಿ.ಎಸ್. ನ್ಯಾಮಗೌಡ ಮಾತನಾಡಿ, ಬಿಜೆಪಿ ಸರ್ಕಾರದ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿದ್ದು, ಪ್ರಾಮಾಣಿಕ ಮತಗಳು ಬಿಜೆಪಿಗೆ ಬರಲಿವೆ. ಸಿ.ಸಿ. ಪಾಟೀಲರು ಜಯಶಾಲಿಯಾಗುತ್ತಾರೆ ಎಂದರು.
ಸಿ.ಸಿ. ಪಾಟೀಲರ ಪುತ್ರ ಉಮೇಶಗೌಡ ಪಾಟೀಲ, ನರಗುಂದ ತಾಲೂಕು ಬಿಜೆಪಿ ಅಧ್ಯಕ್ಷ ಚಂದ್ರು ದಂಡಿನ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷದ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಜಿ.ಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಸದಸ್ಯೆ ಚಂಬವ್ವ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡರ, ವಸಂತ ಮೇಟಿ, ರಾಜುಗೌಡ ಪಾಟೀಲ, ಎಪಿಎಂಸಿ ಪ್ರದೀಪ ನವಲಗುಂದ, ರಾಮನಗೌಡ್ರ ದಾನಪ್ಪಗೌಡ್ರ, ಅಜ್ಜಪ್ಪಗೌಡ ಪಾಟೀಲ, ಕಲ್ಲಪ್ಪ ವಡ್ಡೀನ, ಕಲ್ಲಪ್ಪ ಬಿಳಿಯಲಿ, ರವಿ ನರಸಾಪೂರ, ಬಸವರಾಜ ಕುರಹಟ್ಟಿ, ಶರಣಪ್ಪ ಬಿಳಿಯಲಿ, ಮಹಾದೇವಯ್ಯ ನಂದಿಗೋಡಿಮಠ, ಫಕೀರಗೌಡ ಗೌಡ್ರ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement