ಆಕಸ್ಮಿಕ ಬೆಂಕಿ: ಯುವತಿ ಸಾವು
ಗದಗ: ಚಹಾ ಮಾಡಲು ಒಲೆಗೆ ಸೀಮೆಎಣ್ಣಿ ಹಾಕಿ ಬೆಂಕಿ ಹಂಚುತ್ತಿದ್ದಾಗ ಒಮ್ಮಿಂದಲೇ ಬೆಂಕಿ ಹೊತ್ತಿದ ಪರಿಣಾಮ ಮಹಿಳೆಯ ಸೀರೆಗೆ ಬೆಂಕಿ ತಾಗಿ ಮೈಗೆ ಹತ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಗೀತಾ ಶಿವಲಿಂಗಪ್ಪ ಕೊಟಿಹಾಳ (19) ಎಂದು ಗುರುತಿಸಲಾಗಿದ್ದು, ಬೆಂಕಿ ತಾಗಿದ ಕೂಡಲೇ ಮಹಿಳೆಯನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾಳೆ. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.