ಇಂದು ವಿವಿಧ ಕೃಷಿ ಕಾರ್ಯಕ್ರಮಗಳು
ಗದಗ: ತೋಂಟದಾರ್ಯ ಜಾತ್ರಾ ಮಹೋತ್ಸವ ನಿಮಿತ್ತ ಏ. 26ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆಯ ವರೆಗೆ ಕೃಷಿ ವಿಚಾರ ಸಂಕಿರಣ, ಕೃಷಿ ವಿಜ್ಞಾನಿಗಳ ಸಂವಾದ, ಗೃಹ ವಿಜ್ಞಾನ ತರಬೇತಿ ಹಾಗೂ ವಿಡಿಯೋ ಪ್ರದರ್ಶನ ಜರುಗುವವು. ಈ ಕಾರ್ಯಕ್ರಮದಲ್ಲಿ ಕೃಷಿ ಪಂಡಿತರು, ಕೃಷಿಯಲ್ಲಿ ಹೆಚ್ಚಿನ ಅನುಭವ ಪಡೆದವರು ಪಾಲ್ಗೊಳ್ಳಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಯಶಸ್ವಿಗೊಳಿಸಬೇಕೆಂದು ಜಾತ್ರಾ ಮಹೋತ್ಸವದ ಅಧ್ಯಕ್ಷ ಕೆ.ಎಸ್.ಚೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಕೆಜೆಪಿ ರೈತ ಘಟಕದ ಸಭೆ
ಮುಂಡರಗಿ: ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಕೆಜೆಪಿ ರೈತ ಘಟಕದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯನ್ನು ಏ. 26ರಂದು ಬೆಳಗ್ಗೆ 11 ಗಂಟೆಗೆ ಪುರಸಭೆ ಉದ್ಯಾನವನದ ಪಕ್ಕದಲ್ಲಿರುವ ಕಟ್ಟಡದಲ್ಲಿ ಕರೆಯಲಾಗಿದೆ. ಅಧ್ಯಕ್ಷತೆಯನ್ನು ಮತಕ್ಷೇತ್ರದ ರೈತ ಘಟಕದ ಅಧ್ಯಕ್ಷ ಅಂದಾನಗೌಡ ಕುಲಕರ್ಣಿ ವಹಿಸುವರು. ಶಿರಹಟ್ಟಿ ತಾಲೂಕಾಧ್ಯಕ್ಷ ಮಹೇಶ ಹೊಗೆಸೊಪ್ಪಿನ, ಮುಂಡರಗಿ ಅಧ್ಯಕ್ಷ ಕಾಂತರಾಜ ಹಿರೇಮಠ, ಎಸ್.ಜಿ. ಪುರದ, ಬಸವರಾಜ ನವಲಗುಂದ, ಅಶೋಕ ಮೇಗಳಮನಿ ಇತರರು ಪಾಲ್ಗೊಳ್ಳುವರು ಎಂದು ರೈತ ಘಟಕ ಕಾರ್ಯದರ್ಶಿ ಬಿ.ಎಸ್. ಹೂಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ರಮ ಮದ್ಯ ವಶ
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದ ಕಾಶಿ ವಿಶ್ವನಾಥ ದೇವಸ್ಥಾನದ ಹತ್ತಿರ ಅನಧಿಕೃತವಾಗಿ ಸಾಗಿಸುತ್ತಿದ್ದ ರು. 43,344 ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಮಾರುತಿ ತಳವಾರ ಎಂಬುವರನ್ನು ಬಂಧಿಸಲಾಗಿದ್ದು, ದ್ವಿಚಕ್ರ ವಾಹನದಲ್ಲಿ ಅನಧಿಕೃತವಾಗಿ ಮದ್ಯ ಸಾಗಿಸುತ್ತಿದ್ದಾಗ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ವಿಶೇಷ ಪೊಲೀಸ್ ಠಾಣೆಯ ಸಿಬ್ಬಂದಿ ದಾಳಿ ನಡೆಸಿದ್ದಾರೆ.