ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ
ಗಜೇಂದ್ರಗಡ: ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ರೋಣ ವಿಧಾನಸಭಾ ಚುನಾವಣಾ ವೀಕ್ಷಕ ಆರ್.ಆರ್. ಸಹಾಯ್ ಎಚ್ಚರಿಕೆ ನೀಡಿದರು.
ಅವರು ಗುರುವಾರ ಪಟ್ಟಣದ 23 ವಾರ್ಡ್ಗಳಲ್ಲಿರುವ 25 ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ಪರ್ಧಾ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳ ಚಲನ ವಲನಗಳ ಮೇಲೆ ನಿಗಾವಹಿಸಲಾಗಿದ್ದು, ಯಾವುದೇ ಅಕ್ರಮಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ಈ ಕುರಿತು ಅಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಲಾಗಿದೆ. ಪರವಾನಗಿ ರಹಿತ ಯಾವುದೇ ಸಭೆ, ಸಮಾರಂಭ ಸೇರಿ ಇನ್ನಿತರ ಚಟುವಟಿಕೆ ಮೇಲೆ ನಿಗಾ ವಹಿಸಲಾಗಿದೆ ಎಂದು ಅವರು ಹೇಳಿದರು. ಪ್ರಶಾಂತ ವರಗಪ್ಪನವರ, ಎನ್.ಎಸ್. ಖಾಜಿ, ವಿಶೇಷ ತಹಸೀಲ್ದಾರ್ ಸಿ.ಎಂ. ಕಲಹಾಳ, ಮಹಾಂತೇಶ ಬೀಳಗಿ, ಸಿ.ಕೆ. ಕುಲಕರ್ಣಿ, ಪುರಸಭೆ ಆರೋಗ್ಯ ನಿರೀಕ್ಷಕ ಮಹೇಶ ನಿಡಶೀಸಿ, ಬಸವರಾಜ ಬಳಗಾನೂರ, ಉಪಸ್ಥಿತರಿದ್ದರು.