ಬಿಜೆಪಿ ಅಭ್ಯರ್ಥಿ ಮುನೇನಕೊಪ್ಪ ಪ್ರಚಾರ
ನವಲಗುಂದ: ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸ ಕ್ಷೇತ್ರಕ್ಕೆ ತರಲು ಶ್ರಮವಹಿಸಿದ್ದೇನೆ. ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿ ಮಾಡಲು ಆಶೀರ್ವದಿಸಬೇಕೆಂದು ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೊಪ್ಪ ಮತದಾರರಲ್ಲಿ ಮನವಿ ಮಾಡಿಕೊಂಡರು. ಅವರು ವಿಧಾನಸಭಾ ಕ್ಷೇತ್ರದ ಬಸಾಪೂರ, ಮಜ್ಜಿಗುಡ್ಡ, ಸೈದಾಪೂರ, ಸಾಸ್ವಿಹಳ್ಳಿ, ಶಿಶ್ವಿನಹಳ್ಳಿ, ನಲವಡಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ನಂತರ ನಲವಡಿ ಗ್ರಾಮದಲ್ಲಿ ಸೇರಿದ ಮತದಾರರನ್ನುದ್ದೇಶಿಸಿ ಮಾತನಾಡಿದರು. ಗಿರೀಶ ಗಿರಡ್ಡಿ, ಮೌಲಾಸಾಬ ದಾವಲಖಾನವರ, ಗುರಪ್ಪಗೌಡ ದೊಡ್ಡಗೌಡ್ರ, ಅಶೋಕ ಹರ್ತಿ, ಗಿರೀಶ ಮಂಟೂರ ಹಲವಾರು ಕಾರ್ಯಕರ್ತರು ವಿವಿಧ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಧುರೀಣರಾದ ಮಂಜುನಾಥಗೌಡ ಪಾಟೀಲ, ಜಿಪಂ ಸದಸ್ಯ ಸುರೇಶ ಗಾಣಿಗೇರ, ಮಾಬಳೇಶ್ವರ ಅಣ್ಣಿಗೇರಿ, ವೀರಪ್ಪ ನಾಯ್ಕರ, ಹನಮಂತಗೌಡ ಪಾಟೀಲ, ಸುರೇಶ ಮನಮಿ, ಮಂಜುನಾಥಗೌಡ್ರ, ಅಜ್ಜಪ್ಪ ಹೊರಕೇರಿ, ಗಿರೀಜಾ ಮುಳುಗುಂದಮಠ, ವಿ.ಎಸ್. ಚಿವಟೆ ಇತರರು ಇದ್ದರು.