ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂಭ್ರಮದ ಕಾಲಕಾಲೇಶ್ವರ ರಥೋತ್ಸವ

Lingaraj Badiger
Updated On : 26 Apr 2013, 10:59 am

ಗಜೇಂದ್ರಗಡ: ನಾಡಿನ ಅಸಂಖ್ಯಾತ ಭಕ್ತರ ಆರಾಧ್ಯ ದೈವ ದಕ್ಷಿಣ ಕಾಶಿ ಖ್ಯಾತಿಯ ಐತಿಹಾಸಿಕ ಕಾಲಕಾಲೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಪುಷ್ಪಾಲಂಕೃತ ಮಹಾರಥೋತ್ಸವ ದವನ ಹುಣ್ಣಿಮೆಯಾದ ಗುರುವಾರ ಸಂಜೆ ಸಂಭ್ರಮದಿಂದ ನೆರವೇರಿತು. ದೇಗುಲ ಧರ್ಮದರ್ಶಿಗಳು ಮುಗಿಲೆತ್ತರಕ್ಕೆ ತುಪಾಕಿ ಹಾರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತಸಮೂಹ ಹರ್ಷೋದ್ಗಾರದ ನಡುವೆ ಭಜನೆ, ಝಾಂಜ ಮೇಳ, ಡೊಳ್ಳು, ಸಂಗೀತ ವಾದ್ಯಗಳು, ನಂದಿಕೋಲು, ಛತ್ರ-ಚಾಮರ ಸಹಿತ ರಥವನ್ನು ಭಕ್ತಿ ಭಾವದಿಂದ ಎಳೆಯಲಾಯಿತು. ಜಾತ್ರೆಯ ವೈಶಿಷ್ಟ್ಯ ಪ್ರತಿಬಿಂಬಿಸುವ ಸುವಾಸನೆ ಭರಿತ ದವನ ಸಸ್ಯ, ಉತ್ತತ್ತಿ ಹಾಗೂ ಬಾಳೆಹಣ್ಣನ್ನು ತೇರಿಗೆ ಅರ್ಪಿಸಲಾಯಿತು. ಅನಂತರ ಬೆಟ್ಟದ ಮೇಲಿನ ದೇವರ ದರ್ಶನ ಪಡೆದು ಪುನೀತರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement