ಸಂಯುಕ್ತಾ ಬಂಡಿ ಮತಯಾಚನೆ
ಮುಂಡರಗಿ: ರೋಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಪರವಾಗಿ ಅವರ ಪತ್ನಿ ಸಂಯುಕ್ತಾ ಬಂಡಿ ಗುರುವಾರ ಡಂಬಳ ಹೋಬಳಿಯಲ್ಲಿ ಚುನಾವಣಾ ಪ್ರಚಾರ ಕೈಗೊಂಡರು.
ಡಂಬಳ ಹನುಮಂತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಮತದಾರರ ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸಿದರು. ಪ್ರಚಾರ ಆರಂಭಿಸುವ ಮೊದಲು ಮಹಿಳೆಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಯುಕ್ತಾ ಬಂಡಿ, ಮಹಿಳೆಯರು ಅಭಿವೃದ್ಧಿ ಮಾಡಿದವರನ್ನು ಚುನಾಯಿಸಬೇಕು. ತಮ್ಮ ಹಕ್ಕುಗಳನ್ನು ಪಡೆದು ಸ್ವಾವಲಂಬನೆ ಜೀವನ ಮಾಡಬೇಕು ಎಂದರು. ಸರೋಜಿನಿ ಭಾರದ್ವಾಜ, ಬಸವರಾಜ ಕೊಟಗಿ ಮಾತನಾಡಿದರು. ಜಿಪಂ ಸದಸ್ಯ ಬೀರಪ್ಪ ಬಂಡಿ, ತಾಪಂ ಸದಸ್ಯ ನಿಂಗಬಸಪ್ಪ ಪ್ಯಾಟಿ, ಶಿವಪ್ಪ ಅಂಕದ, ಡಿ. ಪ್ರಸಾದ, ಗವಿಸಿದ್ದಪ್ಪ ಹಾದಿಮನಿ, ಎಸ್.ವಿ. ಪಾಟೀಲ, ಗಿಡ್ಡಪ್ಪ ಹಾರೋಗೇರಿ, ಗವಿಸಿದ್ದಪ್ಪ ಬಿಸನಳ್ಳಿ, ರುದ್ರಪ್ಪ ಏಣಗಿ, ಸಣ್ಣ ಹನುಮಪ್ಪ ಬಂಡಿ, ಶಂಕ್ರಮ್ಮ ಚೌಡಕಿ, ಶಂಕರಗೌಡ ಜಾಯನಗೌಡರ, ವೆಂಕನಗೌಡ ಪಾಟೀಲ ಮುಂತಾದವರು ಇದ್ದರು.