ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂವಿಧಾನ ಬಸವ ತತ್ವಗಳ ಆಧಾರದಲ್ಲಿದೆ: ಸುಭಾಸ

Lingaraj Badiger
Updated On : 26 Apr 2013, 11:00 am

ಗದಗ: ನಮ್ಮ ಸಂವಿಧಾನವೂ ಬಸವ ತತ್ವಗಳ ಆಧಾರದಲ್ಲಿದೆ ಎಂದರೆ ತಪ್ಪಾಗಲಾರದು ಎಂದು ರಾಜ್ಯ ಉಪಲೋಕಾಯುಕ್ತ ಸುಭಾಸ ಆದಿ ಹೇಳಿದರು.
ಅವರು ಬುಧವಾರ ರಾತ್ರಿ ಗದಗ ನಗರದ ತೋಂಟದಾರ್ಯ ಮಠದ ಆವರಣದಲ್ಲಿ ತೋಂಟದಾರ್ಯ ಮಠದ 2013ನೇ ಸಾಲಿನ ಜಾತ್ರಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಮಠಗಳು ಸರ್ಕಾರದ ಅನುದಾನ ಸಹಾಯವಿಲ್ಲದೆ ಭಕ್ತರ ಕಿರುಕಾಣಿಕೆಗಳಿಂದ ಹಲವು ಶಿಕ್ಷಣ ಸಂಸ್ಥೆಗಳ ಮೂಲಕ ನಾಡಿನ ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ವಸತಿ, ಪ್ರಸಾದ ನೀಡುತ್ತಿವೆ. ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರಕ್ಕಿಂತಲೂ ಮಿಗಿಲಾಗಿ ಸೇವೆಗೈಯುತ್ತ ಬಂದಿರುವುದನ್ನು ನಾವು ಗೌರವಿಸಬೇಕಾಗಿದೆ ಎಂದರು. ಲಿಂಗಾಯತ ಪುಣ್ಯಪುರುಷರ ಸಾಹಿತ್ಯ ರತ್ನಮಾಲೆಯ ಗ್ರಂಥಬಿಡುಗಡೆ ಕಾರ್ಯಕ್ರಮ ವಿದ್ಯುಕ್ತವಾಗಿ ಜರುಗಿತು. ಡಾ. ಬಿ.ಎಸ್. ಗವಿಮಠ, ಬೆಳಗಾವಿ ಇವರು ರಚಿಸಿದ ಚಿಕ್ಕೋಡಿ ಶಿವಲಿಂಗಸ್ವಾಮಿಗಳು, ಡಾ. ಪಿ.ಜಿ. ಕೆಂಪಣ್ಣನವರ, ಚಿಕ್ಕೋಡಿ ಇವರು ರಚಿಸಿದ ಬಸವಪ್ರಭು ದೇಸಾಯಿ, ಶಿರೀಷ್ ಜೋಶಿ, ಬೆಳಗಾವಿ ಇವರು ರಚಿಸಿದ ಗಡಹಿಂಗ್ಲಜ ಚಂದ್ರಮ್ಮತಾಯಿಗಳು, ಡಾ. ಬಸವರಾಜ ಜಗಜಂಪಿ, ಬೆಳಗಾವಿ ಇವರು ರಚಿಸಿದ ಎಸ್.ಡಿ. ಇಂಚಲ ಮತ್ತು ಪ್ರಕಾಶ ಗಿರಿಮಲ್ಲನವರ, ಬೆಳಗಾವಿ ಇವರು ರಚಿಸಿದ ಹುಕ್ಕೇರಿ ಬಾಳಪ್ಪನವರು ಗ್ರಂಥಗಳು ಬಿಡುಗಡೆಗೊಂಡವು. ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಡಾ. ಬಸವರಾಜ ಜಗಜಂಪಿ ಗ್ರಂಥ ಪರಿಚಯಿಸಿದರು. ಗ್ರಂಥದಾನಿಗಳಾದ ಡಾ.ಎಸ್.ಡಿ. ಪ್ಯಾಟಿ, ಜಿ.ಎಸ್. ಮಾಳವಾಡ, ರತ್ನಕ್ಕ ಪಾಟೀಲ, ಗೌರಮ್ಮ ಹಂಟೂಳ, ವೀರಯ್ಯ ವಿರಕ್ತಮಠ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎನ್.ತಿಪ್ಪಣ್ಣ, ಹಿಂದೂ-ಮುಸ್ಲಿಂ ಭಾವೈಕ್ಯ ನಿಧಿ ಗೊಳಸಂಗಿಯ ಕಾಶೀಂಸಾಬ ಬಿಜಾಪೂರ, ಸಂಮಾನಿತರಾದ ಡಾ.ಸಿದ್ಧನಗೌಡ ಪಾಟೀಲ, ಡಾ. ಸರಜೂ ಕಾಟ್ಕರ, ಗ್ರಂಥಕರ್ತ ಪ್ರಕಾಶ ಗಿರಿಮಲ್ಲನವರ, ಶಿರೀಷ ಜೋಶಿ, ಡಾ. ಪಿ.ಜಿ. ಕೆಂಪಣ್ಣನವರ, ಎಂ.ಎಸ್. ಇಂಚಲ, ಜಾತ್ರಾ ಮಹೋತ್ಸವದ ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ, ಕಿಶನ್ ಮೇರವಾಡೆ ಮುಂತಾದವರು ಇದ್ದರು. ರೇವಣಸಿದ್ದಯ್ಯ ಮರಿದೇವರಮಠ ಇವರಿಂದ ವಚನ ಸಂಗೀತ ಜರುಗಿತು. ಜಾತ್ರಾ ಮಹೋತ್ಸವದ ಅಧ್ಯಕ್ಷ ಕೆ.ಎಸ್. ಚೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ದತ್ತಪ್ರಸನ್ನ ಪಾಟೀಲ ಹಾಗೂ ಕ್ಷಮಾ ಮಠ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement