ಹುಬ್ಬಳ್ಳಿಯಲ್ಲಿ ಮಳೆ
ಹುಬ್ಬಳ್ಳಿ: ಬಿಸಿಲಿನ ಪ್ರಖರತೆಗೆ ಸಿಲುಕಿದ ಹುಬ್ಬಳ್ಳಿ ನಿವಾಸಿಗಳಿಗೆ ಬುಧವಾರ ಮಧ್ಯರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಳೆ ತಂಪನ್ನೆರೆಯಿತು. ಗುಡುಗು ಸಿಡಿಲಿನೊಂದಿಗೆ ಶುರುವಾದ ಮಳೆಯ ಹೊಡೆತಕ್ಕೆ ಅಲ್ಲಲ್ಲಿ ಮರಗಳ ಟೊಂಗೆಗಳು ಮುರಿದು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಪೂರೈಕೆಯಲ್ಲೂ ಬೆಳಗ್ಗೆವರೆಗೆ ವ್ಯತ್ಯಯವುಂಟಾಯಿತು. ಗುರುವಾರ ಇಳಿ ಸಂಜೆ ಹೊತ್ತಿನಲ್ಲಿ ಕೂಡ ಭಾರಿ ಪ್ರಮಾಣದಲ್ಲಿ ಮಳೆ ಲಕ್ಷಣಗಳಿತ್ತು. ಆದರೆ ಬೀಸಿದ ರಭಸದ ಗಾಳಿಯ ಪರಿಣಾಮವಾಗಿ ನಗರದ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆಯಾಯಿತು.