ಇಂದು ಉಪನ್ಯಾಸ
ಗದಗ: ಗದಗ ಜಿಲ್ಲಾ ಕಸಾಪ ವತಿಯಿಂದ ಶನಿವಾರ ಸಾಹಿತ್ಯ ಸಂಜೆಯ ಕಾರ್ಯಕ್ರಮದ ಅಂಗವಾಗಿ ಏ. 27ರ ಸಂಜೆ 6 ಗಂಟೆಗೆ ತಾಪಂ ಆವರಣದಲ್ಲಿರುವ ಜಿಲ್ಲಾ ಕಸಾಪ ಕಚೇರಿಯಲ್ಲಿ ಉಪನ್ಯಾಸ ನಡೆಯಲಿದೆ. ಬೀಚಿಯವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಬೀಚಿಯವರ ಜೀವನ ಸಂದೇಶ ಕುರಿತು ಗದುಗಿನ ಕೆ.ವಿ.ಎಸ್.ಆರ್. ಕಾಲೇಜಿನ ಆಂಗ್ಲಭಾಷಾ ಅಧ್ಯಾಪಕ ಪ್ರೊ. ಅನಿಲ ವೈದ್ಯ ಉಪನ್ಯಾಸ ನೀಡಲಿದ್ದಾರೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶರಣು ಗೊಗೇರಿ, ಡಾ. ಸಂಗಮೇಶ ತಮ್ಮನಗೌಡರ, ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಶಿಬಿರ
ನರೇಗಲ್ಲ: ಸ್ಥಳೀಯ ರೋಟರಿ ಸಂಸ್ಥೆ, ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ನೇತ್ರದಾನ ಸಂಸ್ಥೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ನರೇಗಲ್ಲ ಇವರ ಆಶ್ರಯದಲ್ಲಿ ಏ. 27ರ ಬೆಳಗ್ಗೆ 9ರಿಂದ 12 ಗಂಟೆಯ ವರೆಗೆ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಬಸ್ ನಿಲ್ದಾಣದ ಪಕ್ಕದಲ್ಲಿರುವ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.