ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 26
5 ವರ್ಷಗಳ ಕಾಲ ಬಿಜೆಪಿ ಸರ್ಕಾರದ ದುರಾಡಳಿತದಿಂದ ಮತದಾರರು ಬೇಸತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುವುದು ಅಷ್ಟೇ ಸತ್ಯವಾಗಿದೆ ಎಂದು ಶಿರಹಟ್ಟಿ ಮೀಸಲು ಕ್ಷೇತ್ರದ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಹೇಳಿದರು. ಅವರು ಶುಕ್ರವಾರ ಸಂಜೆ ಮುಂಡರಗಿ ಪುರಸಭೆ ವ್ಯಾಪ್ತಿಯ ಎಸ್.ಎಸ್. ಪಾಟೀಲ ನಗರದಲ್ಲಿ ಮನೆ ಮನೆ ತೆರಳಿ ಮತಯಾಚಿಸಿ ಅನಂತರ ಮತದಾರರನ್ನುದ್ದೇಶಿಸಿ ಮಾತನಾಡಿದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿಜಯಕುಮಾರ ಶಿಳ್ಳೀನ, ಚಂದ್ರಹಾಸ ಉಳ್ಳಾಗಡ್ಡಿ, ಡಾ. ಬಿ.ಎಸ್.ಮೇಟಿ, ಎ.ಪಿ. ದಂಡಿನ, ಗ್ಯಾನಪ್ಪ ಶೀರಿ, ಶೇಖರಾಜ ಹೊಸಮನಿ, ಪುರಸಭೆ ಸದಸ್ಯ ಸೋಮನಗೌಡ್ರ ಗೌಡ್ರು, ಲಿಂಗರಾಜ ಪಾಟೀಲ, ಬಸವರಾಜ ಗಣಾಚಾರಿ, ರಾಘವೇಂದ್ರ ಕುರಿ, ವೀರೇಶ ಸಜ್ಜರ, ಬಸವರಾಜ ರಾಮೇನಹಳ್ಳಿ, ಪ್ರಕಾಶ ಹಾರೋಗೇರಿ, ಚಂದ್ರು ಬಡಿಗೇರ, ಮುದಿಯಪ್ಪ ಕುಂಬಾರ, ಯಲ್ಲಪ್ಪ ಗಣಾಚಾರಿ, ಅಶೋಕ ಹುಬ್ಬಳ್ಳಿ, ನಾಗೇಶ ಹುಬ್ಬಳ್ಳಿ, ರಾಮು ಭಜಂತ್ರಿ, ಪಾಲಾಕ್ಷಿ ಗಣದಿನ್ನಿ, ಅಬ್ದುಲ್ ಖುರೇಶಿ ಹಾಗೂ ಅನೇಕ ಮಹಿಳಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.