ಬಿದರೂರಗೆ ಬೆಂಬಲ
ಗದಗ: ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರದ ಅನೇಕ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಹಾಗೂ ಗದಗ-ಬೆಟಗೇರಿ ಅವಳಿ ನಗರದಲ್ಲಿ ಶಾಸಕ ಶ್ರೀಶೈಲಪ್ಪ ಬಿದರೂರ ಕೈಗೊಂಡ ಕಾರ್ಯಗಳಿಗೆ ಮೆಚ್ಚಿ 33ನೇ ವಾರ್ಡ್ನಲ್ಲಿ ಹಲವರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡರ, ಕಾಂತಿಲಾಲ ಬನ್ಸಾಲಿ, ಶ್ರೀಕಾಂತ ಖಟವಟೆ, ಮೋಹನ ಮಾಳಶೆಟ್ಟಿ, ಬಸವರಾಜ ಶೀರಿ, ಬಾಬಾಸಾ ಶಿದ್ಲಿಂಗ, ಗಜಾನನ ಹಬೀಬ, ಬಿ.ಎನ್. ಹಬೀಬ, ದೀಪಕ ಕಲಾಲ, ವೆಂಕಟೇಶ ಭಾಂಡಗೆ, ಅಶೋಕ ಖಟವಟೆ, ಜಗದೀಶ ಸೌಕಾರ, ಪ್ರದೀಪ್ ಶೇಠ, ರಮೇಶ ಗಾವರವಾಡ, ಮಂಜು ಕುರುಬರ, ಮಂಜು ಹೂಲಿ, ವಿನಾಯಕ ವೈಕುಂಠೆ, ಪ್ರವೀಣ ಗಾವರವಾಡ, ಸಮೀರ ಧಾರವಾಡ, ನಾಗರಾಜ ಲಕ್ಷ್ಮೇಶ್ವರ, ಪವನ ಶಾಂತಗೇರಿ, ಸಿದ್ದು ಸಾಲಿಮಠ, ಅನಿಲ ಶೆಟ್ಟರ, ನಾರಾಯಣ ಶಿದ್ಲಿಂಗ, ರವಿ ಮಡಿವಾಳರ, ಶ್ರೀನಿವಾಸ ಸೊಮಸಾಳೆ, ಮಂಜುನಾಥ ಮದ್ಲಿ, ರಫೀಕ ಸಾಂಗ್ಲಿ, ರಾಜು ಮಾನ್ವಿ, ಮಾರುತಿ, ಮೈನು ದೊಡ್ಡಮನಿ ಇದ್ದರು.
ಮರಳು ಸಾಗಾಟ: 11 ಲಾರಿ ವಶ
ಲಕ್ಷ್ಮೇಶ್ವರ: ಪಟ್ಟಣದ ಮುಖಾಂತರ ಹುಬ್ಬಳ್ಳಿ ಮತ್ತಿತರ ಕಡೆಗೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ 11 ಲಾರಿಗಳನ್ನು ಲಕ್ಷ್ಮೇಶ್ವರ ಪೊಲೀಸ್ ಠಾಣಾಧಿಕಾರಿ ಟಿ. ವೆಂಕಟಸ್ವಾಮಿ ವಶಪಡಿಸಿಕೊಂಡಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆ ಆವರಣದಲ್ಲಿ ಇಟ್ಟಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.