ಸಮೃದ್ಧ ಕರ್ನಾಟಕ ನಿರ್ಮಾಣ: ಸಂಕಣ್ಣವರ
ಗದಗ: ಸಮೃದ್ಧ ಕರ್ನಾಟಕ ನಿರ್ಮಾಣವೇ ಕೆಜೆಪಿ ಗುರಿಯಾಗಿದ್ದು, ಕೆಜೆಪಿಗೆ ಮತ ನೀಡಿ, ತಮ್ಮನ್ನು ಆಯ್ಕೆಗೊಳಿಸಬೇಕೆಂದು ಕೆಜೆಪಿ ಅಭ್ಯರ್ಥಿ ಎಸ್.ಬಿ. ಸಂಕಣ್ಣವರ ಹೇಳಿದರು.
ಈಚೆಗೆ ಅವರು ನಗರದ 35ನೇ ವಾರ್ಡ್ನಲ್ಲಿ ಕೆಜೆಪಿ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದರು. ಕರ್ನಾಟಕದ ಸಮಸ್ಯೆಗಳು, ಜನರಿಗಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮ ಕುರಿತು ಯಡಿಯೂರಪ್ಪ ಅವರಿಗೆ ಸ್ಪಷ್ಟ ಅರಿವು, ಕಳಕಳಿಯಿದೆ. ಯಡಿಯೂರಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು, ಜನ ಕಲ್ಯಾಣಕ್ಕೆ ಶ್ರಮಿಸಿದ್ದಾರೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ರಾಜು ಕುರಡಗಿ, ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ ಮಾತನಾಡಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಿದ್ದು ಪಲ್ಲೇದ, ಸದು ಮದರಿಮಠ, ಅಮರೇಶ ಅಂಗಡಿ, ಸಂಗಣ್ಣ ಬಂಗಾರಶೆಟ್ರ, ದಾನು ದಾನಪ್ಪಗೌಡ್ರ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಜಾಕ ಡಂಕೇದ, ಇರ್ಷಾದ ಮಾನ್ವಿ, ಖಾಲಿದ ಕೊಪ್ಪಳ, ಅಮರನಾಥ ಬೆಟಗೇರಿ, ವಿಕ್ರಾಂತ ಅಬ್ಬಿಗೇರಿ, ಅರುಣ ಭಾವಿ, ಪೂಜಾ ಬೇವೂರ, ಮುನ್ನಾ ಕುಕನೂರ, ಉಡಚಪ್ಪ ಹಳ್ಳಿಕೇರಿ, ಪ್ರಭು ಹಿರೇಮಠ, ಕೆ.ಪಿ. ಗುಳಗೌಡ್ರ, ಶ್ರೀನಿವಾಸ ಹುಬ್ಬಳ್ಳಿ ಮುಂತಾದವರು ಪಾಲ್ಗೊಂಡಿದ್ದರು.
ಶೋಭಾ ಲಮಾಣಿ ಗೆಲ್ಲಿಸಿ: ಉದಾಸಿ
ಲಕ್ಷ್ಮೇಶ್ವರ: ಮಾಜಿ ಸಚಿವ ಸಿ.ಎಂ. ಉದಾಸಿ ಶುಕ್ರವಾರ ಪಟ್ಟಣಕ್ಕೆ ಆಗಮಿಸಿ, ಕೆಜೆಪಿ ಅಭ್ಯರ್ಥಿ ಶೋಭಾ ಲಮಾಣಿ ಗೆಲುವಿಗೆ ಎಲ್ಲರೂ ಸಹಕರಿಸುವಂತೆ ಮತದಾರರಲ್ಲಿ ವಿನಂತಿಸಿದರು.
ಪಟ್ಟಣದ ಬಿ.ಸಿ. ನೆಲವಿಗಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕೆಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಬಿ.ಸಿ. ನೆಲವಿಗಿ, ಕ್ಷೇತ್ರಪಾಲ ಬರಿಗಾಲಿ, ಆರ್.ಎಫ್. ಪುರಾಣಿಕಮಠ, ಎಸ್.ಜೆ. ಪುರಾಣಿಕಮಠ, ಕೆ.ಬಿ. ಮತ್ತಿಗಟ್ಟಿ, ಸಿ.ಸಿ.ನೂರಶೆಟ್ಟರ, ಪ್ರಶಾಂತ ನೆಲವಿಗಿ, ಮಹೇಶ ಹೊಗೆಸೊಪ್ಪಿನ, ಮಲ್ಲೇಶ ಅಂಕಲಿ, ಪ್ರೇಮ್ ಶೇಠ, ರಫೀಕ ಹುಲಗೇರಿ, ವಿರುಪಾಕ್ಷಗೌಡ ಪಾಟೀಲ, ಬಿ.ಡಿ. ಅಮರಶೆಟ್ಟಿ, ಡಾ. ಎಂ.ಎನ್. ವಡಕಣ್ಣವರ, ಜಿ.ಕೆ. ಕಾರಡಗಿ ಮುಂತಾದವರು ಹಾಜರಿದ್ದರು.