ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೆಜೆಪಿ ಅಧಿಕಾರಕ್ಕೇರಿದರೆ ಬಜೆಟ್ ಗಾತ್ರ ರು. 2 ಲಕ್ಷ ಕೋಟಿ: ಉದಾಸಿ

Mainashree
Updated On : 28 Apr 2013, 10:49 am

ಗದಗ: ರಾಜ್ಯದಲ್ಲಿ ಮತದಾರರು ಕೆಜೆಪಿ ಆಶೀರ್ವದಿಸಿ ಅಧಿಕಾರಕ್ಕೆ ತಂದಲ್ಲಿ ಬಜೆಟ್ ಗಾತ್ರವನ್ನು ರು. 2 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಹೇಳಿದರು.
ಅವರು ಶುಕ್ರವಾರ ರಾತ್ರಿ ನಗರದ ಮುಳಗುಂದ ನಾಕಾ ವೃತ್ತದ ಬಳಿ ಇರುವ ಬಯಲು ಜಾಗೆಯಲ್ಲಿ ನಡೆದ ಗದಗ ವಿಧಾನಸಭಾ ಕೆಜೆಪಿ ಅಭ್ಯರ್ಥಿ ಎಸ್.ಬಿ. ಸಂಕಣ್ಣವರ ಚುನಾವಣಾ ಪ್ರಚಾರಾರ್ಥ ಸಭೆ ಹಾಗೂ ಅಲ್ಪಸಂಖ್ಯಾತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೆಜೆಪಿ ಅಭ್ಯರ್ಥಿ ಎಸ್.ಬಿ. ಸಂಕಣ್ಣವರ, ಕೆಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಕುಸ್ರೋ ಖುರ್ಷಿದ್, ಜಿಲ್ಲಾಧ್ಯಕ್ಷ ರಜಾಕ್ ಡಂಕೇದ, ಸಂಗಣ್ಣ ಬಂಗಾರಶೆಟ್ಟರ, ಸದು ಮದರಿಮಠ, ರಾಜು ಕುರಡಗಿ, ಸಿದ್ದು ಪಲ್ಲೇದ, ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, ವಿಜಯಲಕ್ಷ್ಮೀ ಅಂಗಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement