ಕೆಟ್ಟ ಸರ್ಕಾರ ಕಿತ್ತು ಹಾಕಿ: ಯಾವಗಲ್
ನರಗುಂದ: ಈ ರಾಜ್ಯದಲ್ಲಿ 5 ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಸಿರುವ ಬಿಜೆಪಿ ಸರ್ಕಾರವನ್ನು ಈ ಬಾರಿ ಮತದಾರರು ಬೇರು ಸಮೇತ ಕಿತ್ತು ಹಾಕಬೇಕಿದೆ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ಲ ಹೇಳಿದರು.
ಅವರು ಈಚೆಗೆ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಅನ್ಯ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬಸನಗೌಡ ಸಾಲಿಗೌಡ್ರ, ಬಸವರಾಜ, ಭೀಮಪ್ಪ ಹುರಕಡ್ಲಿ, ಉಮೇಶ ಅಣ್ಣಿಗೇರಿ, ಚನ್ನಬಸಪ್ಪ, ಕುಬೇರಪ್ಪ ಬಡಿಗೇರ, ತೋಟದ, ಅಂಬರೇಶ ಹಿರೇಹೊಳಿ, ನೀಲರಡ್ಡಿ ಚೌಡರಡ್ಡಿ, ಮಹಬೂಬಸಾಬ ಖಾಜಿ, ಕಲ್ಲನಗೌಡ ದೇವರಮನಿ, ಸಿದ್ದಪ್ಪ ಶಲ್ಲಿಕೇರಿ, ಆರ್.ಆರ್. ಮುತ್ತಣ್ಣವರ, ಬಸನಗೌಡ ಯಲ್ಲಪ್ಪಗೌಡ್ರ, ನಾಗಪ್ಪ ಗಾಜಿ, ಲಖಮಾಪುರ ಗ್ರಾಮದವರು ಸೇರಿದಂತೆ ಹಲವಾರು ಮುಖಂಡರು ಸೇರ್ಪಡೆಗೊಂಡರು. ಎಸ್.ಡಿ. ಕೊಳ್ಳಿ, ಮಾರುತಿ ಮೇಟಿ, ಹಂಚಿನಾಳ, ದ್ಯಾಮಣ್ಣ ಸವದತ್ತಿ, ಬಸಪ್ಪ ನರಗುಂದ, ಉಮೇಶ ಹಿರೇಹೋಳಿ, ಟಿ.ಬಿ. ಶಿರಯಪ್ಪಗೌಡ್ರ, ಆರ್.ಎಂ.ಪಾಟೀಲ, ಎಸ್.ಜಿ. ಪಾಟೀಲ, ಎಫ್.ವೈ. ದೊಡಮನಿ, ಕೆಂಚನಗೌಡ್ರ, ಸಿಕಂದರ ಪಠಾಣ, ಬಸಪ್ಪ ಸವದತ್ತಿ, ಎಸ್.ಆರ್. ಪಾಟೀಲ, ರಾಜು ಕಲಾಲ, ಜಗದೇಶ ರಾಯನಗೌಡ್ರ, ದೇಸಾಯಗೌಡ್ರ ಪಾಟೀಲ, ರಾಮಚಂದ್ರ ಪವಾರ, ಮುಂತಾದವರು ಹಾಜರಿದ್ದರು.