ಹಳ್ಳೆಪ್ಪನವರ ಆಯ್ಕೆ ಖಚಿತ: ಪಾಟೀಲ
ಮುಂಡರಗಿ: ಶಿರಹಟ್ಟಿ ಕ್ಷೇತ್ರದಲ್ಲಿ ಎಲ್ಲ ಮತದಾರರು ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಜಯಶ್ರೀ ಹಳ್ಳೆಪ್ಪನವರ್‌ಗೆ ಬೆಂಬಲ ಸೂಚಿಸಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಳ್ಳೆಪ್ಪನವರ ಆಯ್ಕೆ ಖಚಿತ ಎಂದು ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಶಿವರಾಜಗೌಡ ಪಾಟೀಲ ಹೇಳಿದರು. ಅವರು ಭಾನುವಾರ ಶಿರಹಟ್ಟಿ ಮೀಸಲು ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಜಯಶ್ರೀ ಮಹಾಂತೇಶ ಹಳ್ಳೆಪ್ಪನವರ ಪರ ಪಟ್ಟಣದ ವಿವಿಧ ಭಾಗದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ತೆರಳಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿ ಮಾತನಾಡಿದರು. ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಜಯಶ್ರೀ ಹಳ್ಳೆಪ್ಪನವರ ಮಾತನಾಡಿದರು. ಬಿ.ಎಂ. ತಿಮ್ಮಾಪುರ, ಯುವ ಮುಖಂಡ ಮಲ್ಲಿಕಾರ್ಜುನ ದೊಡ್ಡಮನಿ, ಶಿವಣ್ಣ ನಾಯ್ಕರ, ಉಡಚಪ್ಪ ತಿಗರಿ ಪಾಲ್ಗೊಂಡಿದ್ದರು.