ಈಶ್ವರಪ್ಪ ಬ್ಯಾಗ್ನಲ್ಲಿ ರು. 61 ಸಾವಿರ
ಯಾದಗಿರಿ: ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಿರೀಶ ಮಟ್ಟಣ್ಣವರ್ ಪರ ಪ್ರಚಾರಕ್ಕಾಗಿ ಆಗಮಿಸಲು ಡಿಸಿಎಂ ಕೆ.ಎಸ್.ಈಶ್ವರಪ್ಪ ಬಳಸಿದ್ದ ಹೆಲಿಕಾಪ್ಟರ್ನಲ್ಲಿ ದಾಖಲೆಯಿಲ್ಲದ 61,400 ನಗದು ಪತ್ತೆಯಾಗಿದೆ. ಈ ಹಣವನ್ನು ವಶಪಡಿಸಿಕೊಂಡಿರುವ ಚುನಾವಣಾಧಿಕಾರಿಗಳು, ಈಶ್ವರಪ್ಪ ವಿರುದ್ಧ ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಈಶ್ವರಪ್ಪ ಅವರು ಹೆಲಿಕಾಪ್ಟರ್ ಮೂಲಕ ಗುರುಮಠಕಲ್ಗೆ ಬಂದಿಳಿದರು. ಆಗ ಮಜರ್ ಹುಸೇನ್ ನೇತೃತ್ವದ ಎಂಸಿಸಿ ತಂಡದ ಅಧಿಕಾರಿಗಳು ಹೆಲಿಕಾಪ್ಟರ್ ಪರಿಶೀಲಿಸಿದರು. ಅಲ್ಲಿ ಈಶ್ವರಪ್ಪ ಅವರ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ 61,400 ಪತ್ತೆಯಾಗಿದೆ.
ಈ ಬಗ್ಗೆ ಯಾವುದೇ ದಾಖಲೆ ಒದಗಿಸಲು ವಿಫಲರಾದ ಕಾರಣ ಹಣವನ್ನು ವಶಕ್ಕೆ ತೆಗೆದುಕೊಂಡ ಅಧಿಕಾರಿಗಳ ತಂಡ, ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿತು. ಈಶ್ವರಪ್ಪ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.