ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಿಸಿಲು ಲೆಕ್ಕಿಸದೆ ಬಿಜೆಪಿ ಪರ ಮಹಿಳೆಯರ ಪಾದಯಾತ್ರೆ

Vishwanath S
Updated On : 1 May 2013, 11:20 am

ಕನ್ನಡಪ್ರಭ ವಾರ್ತೆ, ಗದಗ, ಏ. 30
ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಹಿಂದೆಂದೂ ಕಾಣದ ಮಹಿಳೆಯರು ದಂಡು ಮಂಗಳವಾರ ರಸ್ತೆಯ ತುಂಬೆಲ್ಲಾ ಪಾದಯಾತ್ರೆಯಲ್ಲಿ ನಿರತವಾಗಿತ್ತು. ಸುಮಾರು ಸಾವಿರಕ್ಕೂ ಹೆಚ್ಚು ಮಹಿಳೆಯರು ಕೈಯಲ್ಲಿ ಧ್ವಜ, ಕೊರಳಲ್ಲಿ ಶಾಲು, ಬಾಯಿ ತುಂಬಾ ಜೈ ಘೋಷಗಳ ಸುರಿಮಳೆ ನಿರಂತರವಾಗಿತ್ತು. ಮನೆ ಮನೆಗೆ ಭೇಟಿ ನೀಡಿ ಮತ ಕೇಳುತ್ತಿರುವ ಮಹಿಳೆಯರ ವಿನಂತಿಯ ದೃಶ್ಯ, ರಸ್ತೆಯುದ್ದಕ್ಕೂ ಮಹಿಳೆಯರೇ ಮಹಿಳೆಯರು, ಇದು ಯಾವುದೋ ಜಾತ್ರೆಯ ಗದ್ದಲವಿರಬಹುದು ಎಂದು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಇದು ನರಗುಂದ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲರ ಪರ ಪತ್ನಿ ಶೋಭಾ ಪಾಟೀಲ ನೇತೃತ್ವದಲ್ಲಿ ಕೈಗೊಂಡ ಭಾರಿ ಪ್ರಚಾರ.
ಮನೆ ಮನೆಯಲ್ಲಿರುವ ಮತದಾರರಿಗೆ ಬಿಜೆಪಿ ಸರ್ಕಾರದ ಸಾಧನೆಗಳಾದ ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ, ಆರೋಗ್ಯ ಭಾಗ್ಯಕ್ಕಾಗಿ 108 ವಿಶೇಷ ಯೋಜನೆ, ರೈತರಿಗೆ ಬಡ್ಡಿ ರಹಿತ ಸಾಲ ಮತ್ತು ಸಾಲ ಮನ್ನಾ, ಶಿಕ್ಷಣ ಸಾಕಾರಕ್ಕಾಗಿ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್, ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಸಿಸಿ ರಸ್ತೆ, ಹೀಗೆ ಹತ್ತು ಹಲವಾರು ನೂತನ ಯೋಜನೆಗಳನ್ನು ಜನರಿಗೆ ತಲುಪಿಸಿದ ಬಿಜೆಪಿ ಕಾರ್ಯಗಳನ್ನು ತಿಳಿಸಿ ಮತಯಾಚನೆ ಮಾಡುತ್ತಿರುವುದು ಸಾಮಾನ್ಯವಾಗಿತ್ತು.
ಇದೇ ಸಂದರ್ಭದಲ್ಲಿ ಗ್ರಾಪಂನ ಮಾಜಿ ಅಧ್ಯಕ್ಷೆ ಅನಸವ್ವ ಅಂಬಕ್ಕಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ನಂತರ ಸೇರಿದ ಸಭೆಯಲ್ಲಿ ಶೋಭಾ ಪಾಟೀಲ ಮಾತನಾಡಿ, ನಮ್ಮ ಪತಿಯವರು ಆಸ್ಪತ್ರೆಯಲ್ಲಿ ಇದ್ದರೂ ಕೂಡ ಅವರ ಅಭಿಮಾನದ ಮೇಲೆ ಲಕ್ಕುಂಡಿಯ ಮಹಿಳೆಯರು ಸೇರಿ ಮತಯಾಚನೆ ಮಾಡುತ್ತಿರುವುದು ಶ್ಲಾಘನೀಯವಾಗಿದ್ದು, ಗೆಲುವು ಖಚಿತ ಎಂದರು. ಜಿಪಂ ಸದಸ್ಯೆ ಚಂಬವ್ವ ಪಾಟೀಲ, ತಾಪಂ ಸದಸ್ಯ ಮಹೇಶ ಮುಸ್ಕಿನಬಾವಿ ಮಾತನಾಡಿದರು.
ಪ್ರದೀಪ ನವಲಗುಂದ, ವಸಂತ ಮೇಟಿ, ರಾಜುಗೌಡ ಪಾಟೀಲ, ರಾಮನಗೌಡ ದಾನಪ್ಪಗೌಡ್ರ, ದತ್ತಣ್ಣ ಜೋಶಿ, ಗ್ರಾಪಂ ಸದಸ್ಯ ಅಂದಪ್ಪ ತಿಮ್ಮಾಪೂರ, ಅಜ್ಜಪ್ಪಗೌಡ ಪಾಟೀಲ, ಈಶ್ವರಪ್ಪ ಕುಂಬಾರ, ಈರಪ್ಪ ಕಮತರ, ಈರಪ್ಪ ಸೊಪ್ಪಿನ, ಮಲ್ಲಪ್ಪ ಕಮತರ, ಮರಿಯಪ್ಪ ವಡ್ಡರ, ಪ್ರೇಮಾ ಮಟ್ಟಿ, ಗ್ರಾಪಂ ಸದಸ್ಯೆ ದ್ರಾಕ್ಷಾಣೆವ್ವ ಅರಹುಣಸಿ, ಶಾಂತವ್ವ ವಡ್ಡಟ್ಟಿ, ಶಾಂತವ್ವ ಕಡತದ, ರುದ್ರಪ್ಪ ಮುಸ್ಕಿನಬಾವಿ, ಮಹಾಂತೇಶ ಮೆಣಸಿನಕಾಯಿ, ಶಂಕ್ರಪ್ಪ ಬಣವಿ, ಪ್ರಕಾಶ ಅರಹುಣಸಿ, ಶರಣಪ್ಪ ಕಮತರ, ಕೃಷ್ಣ ಹಡಗಲಿ, ಮಹಮ್ಮದ ರಫಿಕ ಹುಬ್ಬಳ್ಳಿ, ನೀಲಪ್ಪ ಕಲ್ಲೂರ, ವಿರೂಪಾಕ್ಷಿ ಬೇಟಗೇರಿ, ಮೈಲಾರಪ್ಪ ಗುಂಜಳ, ಈರಪ್ಪ ಬಂಡಿ, ರುದ್ರಯ್ಯ ಮುನವಳ್ಳಿಮಠ, ವೆಂಕಟೇಶ ದೊಂಗಡೆ, ಬಸವರಾಜ ಕವಲೂರ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement