ಸಿ.ಸಿ. ಪಾಟೀಲ್ ಪರ ಮತಯಾಚನೆ
ಗದಗ: ಮತದಾರರೇ ಹೇಳುವಂತೆ ಅಭಿವೃದ್ಧಿ ಕೆಲಸಗಳು ಅಂದರೆ ಏನು ಎಂಬುದನ್ನು ಬಿಜೆಪಿ ಸರ್ಕಾರ ಕಳೆದ 5 ವರ್ಷಗಳ ಅಧಿಕಾರಾವಧಿಯಲ್ಲಿ ತೊರಿಸಿಕೊಟ್ಟಿದೆ ಎಂದು ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲರ ಪತ್ನಿ ಶೋಭಾ ಹೇಳಿದರು.
ಈಚೆಗೆ ಅವರು ತಾಲೂಕಿನ ಹೊಂಬಳ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಕೈಗೊಂಡು ಮಾತನಾಡಿದರು. ಕಳೆದ ಏ. 19ರಿಂದ ನರಗುಂದ, ಗದಗ, ರೋಣ ತಾಲೂಕುಗಳ ಗ್ರಾಮಗಳಲ್ಲಿ ಸಿ.ಸಿ.ಪಾಟೀಲರ ಪರ ಮತಯಾಚನೆ ಮಾಡುತ್ತಿದ್ದು ಹಲವಾರು ಮಹಿಳಾ ಮಂಡಳಗಳು, ಸ್ತ್ರೀ ಶಕ್ತಿ ಸಂಘಗಳು ನನ್ನ ಜತೆ ಕೈಜೋಡಿಸಿ ಸಿ.ಸಿ.ಪಾಟೀಲರ ಪರ ಮತಯಾಚನೆ ಬಂದಿದ್ದಾರೆ. ನನ್ನ ಪತಿಯವರ ಗೆಲವಿಗೆ ಎಲ್ಲ ಕಾರ್ಯಕರ್ತರು ಶ್ರಮಿಸುತ್ತಿದ್ದು, ಅವರ ಶ್ರಮದಿಂದಲೇ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿ.ಸಿ. ಪಾಟೀಲರ ಪುತ್ರಿ ದೀಪಾ ಪಾಟೀಲ ಮಾತನಾಡಿದರು. ಎಪಿಎಂಸಿ ಸದಸ್ಯ ಪ್ರದೀಪ ನವಲಗುಂದ, ಮಾಜಿ ಅಧ್ಯಕ್ಷ ಶಿವನಗೌಡ ಕರಿಗೌಡ, ವಸಂತ ಮೇಟಿ, ರಾಜುಗೌಡ ಪಾಟೀಲ, ರಾಮನಗೌಡ ದಾನಪ್ಪಗೌಡ್ರ, ಬಂಡಿವಾಡ, ಗ್ರಾಪಂ ಸದಸ್ಯ ಬಸಪ್ಪ ಹುಣಸಿಮರದ, ದಸ್ತಗೀರಸಾಬ ಬಾಪೂನವರ, ಕಳಕಪ್ಪ ಕುರಹಟ್ಟಿ, ವಿ.ಕೆ. ಸೂಡಿ, ಎಂ.ವೈ. ಹುಣಸಿಕಟ್ಟಿ ಮುಂತಾದವರು ಪಾಲ್ಗೊಂಡಿದ್ದರು.