ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗುಣಮಟ್ಟದ ಶಿಕ್ಷಣ ನೀಡಿ: ಉಮೇಶ

Lingaraj Badiger
Updated On : 2 Aug 2013, 10:49 am

ಗದಗ: ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಿ, ಉತ್ತಮ ಆರೋಗ್ಯ ಹೊಂದಲು ಬಿಸಿಯೂಟದ ಪೂರ್ವದಲ್ಲಿ ಬೆಳಗಿನ ಅವಧಿಯಲ್ಲಿ ಹಾಲು ನೀಡುತ್ತಿರುವುದು ಉತ್ತಮ ಯೋಜನೆಯಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ಬಾರಕೇರ ಹೇಳಿದರು.
ಅವರು ಗುರುವಾರ ನಗರದ ಸರ್ಕಾರಿ ಮಾದರಿಯ ಕನ್ನಡ ಗಂಡುಮಕ್ಕಳ ಶಾಲೆ ನಂ-10 ಗದಗ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆದ 1ರಿಂದ 10ನೇ ತರಗತಿಯ ಮಕ್ಕಳಿಗೆ ಹಾಲು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಎಸ್.ಎನ್. ಬಳ್ಳಾರಿ ಮಾತನಾಡಿ, ಸಮುದಾಯ ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಶಿಕ್ಷಣದ ಪ್ರಗತಿಗೆ ಸಹಕಾರ ನೀಡಲು ಮನವಿ ಮಾಡಿದರು. ಎಸ್.ವಿ. ಕುರಹಟ್ಟಿ, ಜಿ.ಆರ್. ಪಾಸ್ತೆ, ಎಸ್.ಆರ್. ಹಲಕುರ್ಕಿ, ಎನ್.ಸಿ. ಹದ್ಲಿ, ಎಲ್.ಎನ್. ಗುಜ್ಜಾಯಿ ಮುಂತಾದವರು ಉಪಸ್ಥಿತರಿದ್ದರು. ಎಸ್.ಎ. ಚಂದಪ್ಪನವರ ಸ್ವಾಗತಿಸಿದರು. ಎಸ್.ಸಿ. ಹಾನಗಲ್ಲ ನಿರೂಪಿಸಿದರು. ಜೆ.ಜಿ. ಬಿಸರಳ್ಳಿ ವಂದಿಸಿದರು.

ಸದುಪಯೋಗವಾಗಲಿ: ಬೇಲೂರ
ಗದಗ: ಸರ್ಕಾರವು ಮಕ್ಕಳ ಕಲಿಕೆಗೆ ಸಹಕಾರಿಯಾಗಲಿ ಎಂಬ ಸದುದ್ದೇಶದಿಂದ ಹಲವಾರು ಯೋಜನೆ ರೂಪಿಸುತ್ತಿದ್ದು, ಇದರ ಸದುಪಯೋಗ ಪಡೆದು ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮುವಂತೆ ಶಾಲೆಯ ಗೌರವ ಕಾರ್ಯದರ್ಶಿ ಕೆ.ಎಚ್. ಬೇಲೂರ ಕರೆ ನೀಡಿದರು.  ಅವರು ಸ್ಥಳೀಯ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಗುರುವಾರ ಸರ್ಕಾರದ ಕ್ಷೀರಭಾಗ್ಯ ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಟಿ. ದಾಸರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಡಳಿತ ಮಂಡಳಿ ಸದಸ್ಯ ವಿ.ಬಿ. ಶೇಷಗಿರಿ, ಎಚ್.ಟಿ. ಸಂಜೀವಸ್ವಾಮಿ, ಪಿ.ಟಿ. ಶೇಷಗಿರಿ, ಶಾಲೆಯ ಸಹ ಶಿಕ್ಷಕ ವಿ.ಯು. ಮಾಳೆಕೊಪ್ಪ ಮುಂತಾದವರು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಬಿ.ಎನ್. ಪೊಲೀಸ್ ಪಾಟೀಲ ಸ್ವಾಗತಿಸಿ, ವಂದಿಸಿದರು.
ಮಕ್ಕಳ ಆರೋಗ್ಯಕ್ಕೆ ಸಹಕಾರಿ
ಗದಗ: ಪ್ರಾಥಮಿಕ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆಯನ್ನು ಆ. 1ರಿಂದ ರಾಜ್ಯಾದ್ಯಂತ ಅನುಷ್ಠಾನ ಗೊಳಿಸಲಾಗಿದ್ದು, ಇದು ಮಕ್ಕಳ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಸಿಆರ್‌ಸಿ ಸಂಪನ್ಮೂಲ ವ್ಯಕ್ತಿ ಶಿವಾನಂದ ಗಿಡ್ನಂದಿ ಹೇಳಿದರು. ಅವರು ಗುರುವಾರ ಸ್ಥಳೀಯ ರಾಜೀವಗಾಂಧಿ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ-8 ರಲ್ಲಿ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿದರು. ಹಾಲು ವಿತರಣೆಯಿಂದ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುವಲ್ಲಿ ಸಹಕಾರಿಯಾಗಲಿದೆ ಎಂದರು. ಶಿವಯ್ಯ ಹಿರೇಮಠ, ಶಂಕ್ರಪ್ಪ ಬಣ್ಣದಬಾವಿ, ಚಿನ್ನುಸಾಬ ಕಲಾದಗಿ, ಶಾಲೆಯ ಪ್ರಧಾನ ಗುರು ಎಸ್.ಕೆ. ನಾವಳ್ಳಿ, ಶಿಕ್ಷಕ ವಿ.ಜಿ. ಖೊಡೆ, ಎಸ್.ವಿ. ರಾಮಣ್ಣವರ, ಯು.ಎಸ್. ಕಣವಿ, ಎಸ್.ಆರ್. ಮೇಲಗಿರಿ, ಎಸ್.ಎಸ್. ಕಂಠಿಮಠ, ಎನ್.ಬಿ. ಗೊಂದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement