ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಸರಕೋಡ: ಶಾಲಾ ಸಂಸತ್ ರಚನೆ

Lingaraj Badiger
Updated On : 2 Aug 2013, 10:49 am

ಹೊಳೆಆಲೂರು: ಸಮೀಪದ ಬಸರಕೋಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಶಾಲಾ ಸಂಸತ್ ರಚಿಸಲಾಯಿತು. ಪ್ರಧಾನಮಂತ್ರಿಯಾಗಿ ಶಂಕ್ರಪ್ಪ ಬದಾಮಿ, ಉಪಪ್ರಧಾನಿ ಭೀಮಮ್ಮ ಪೂಜಾರ, ಶಿಕ್ಷಣಮಂತ್ರಿಯಾಗಿ ರೇಣುಕಾ ದೊಡಮನಿ, ಪ್ರಾರ್ಥನಾ ಮಂತ್ರಿಯಾಗಿ ಮಂಜುನಾಥ ಮಾದರ, ಆರೋಗ್ಯ ಮಂತ್ರಿಯಾಗಿ ಸಲೀಂಸಾಬ ದಾದಾಬಯ್ಯಾ, ಸಾಂಸ್ಕೃತಿಕ ಮಂತ್ರಿಯಾಗಿ ಮಂಜುನಾಥ ಬಾರಕೇರ, ಹಣಕಾಸು ಮಂತ್ರಿಯಾಗಿ ಕುಮಾರಪ್ಪ ಗುಣಾರಿ, ವಾಚನಾಲಯ ಮಂತ್ರಿಯಾಗಿ ಮಹೇಶ ಜೊಂಡಿ, ನೀರಾವರಿ ಮಂತ್ರಿಯಾಗಿ ಮೌಲಾಸಾಬ ದಾದಾಬಯ್ಯಾ, ಪ್ರವಾಸ ಮಂತ್ರಿಯಾಗಿ ದೇವರಾಜ ಬದಾಮಿ ಆಯ್ಕೆಯಾದರು.
ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯಾಧ್ಯಾಪಕ ಬಿ.ವೈ. ಗಾಣಿಗೇರ ಕಾರ್ಯನಿರ್ವಹಿಸಿದರು. ಪಾಟೀಲ, ಇಮಾಮಸಾಬ ಅಕ್ಕೋಜಿ, ಅಬ್ದುಲ್ ಪಟೇಲ, ದುರ್ಗಪ್ಪ ಮಾದರ, ನಿಂಗಪ್ಪ ಮತ್ತು ಎಂ.ಪಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಎಸ್.ಆರ್. ಪೂಜಾರ ಮಾದರಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಕೆ.ಬಿ. ಕಡೇಮನಿ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement