ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಿಸಿಯೂಟ ಜಾಗ್ರತೆಯಿಂದ ತಯಾರಿಸಿ: ನಾಯಕ

Lingaraj Badiger
Updated On : 2 Aug 2013, 10:49 am

ನರಗುಂದ:  ಸರ್ಕಾರದ ಮಹತ್ವಾಕಾಂಕ್ಷಿ ಬಿಸಿಯೂಟ ಯೋಜನೆಯಲ್ಲಿ ಬಿಸಿಯೂಟ ತಯಾರಿಸುವ ಅಡುಗೆದಾರರು ಅತಿ ಜಾಗ್ರತೆ ವಹಿಸುವ ಮೂಲಕ ಮಕ್ಕಳಿಗೆ ಉತ್ತಮ ಬಿಸಿಯೂಟ ನೀಡುವಲ್ಲಿ ಶ್ರಮಿಸಬೇಕು ಎಂದು ಗದಗನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೀವ ನಾಯಕ ಹೇಳಿದರು. ಈಚೆಗೆ ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಬಿಇಓ, ಬಿಆರ್‌ಸಿ, ಬಿಆರ್‌ಪಿ, ಸಿಆರ್‌ಪಿ ಹಾಗೂ ಶಿಕ್ಷಕರ ಸಂಘದ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು. ತಾಲೂಕು ಸೇರಿದಂತೆ ಗ್ರಾಮೀಣ ಭಾಗದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವಲ್ಲಿನ ಸ್ವಚ್ಛತೆ ಬಗ್ಗೆ ಹೆಚ್ಚು ಮೇಲಧಿಕಾರಿಗಳು ಜಾಗ್ರತೆ ವಹಿಸಬೇಕು. ಅಡುಗೆದಾರರು ಮಕ್ಕಳಿಗೆ ಉತ್ತಮ ಅಡುಗೆ ತಯಾರಿಸುವ ಸಂದರ್ಭದಲ್ಲಿ ಹೆಚ್ಚು ಜಾಗ್ರತೆ ವಹಿಸಿ, ದಾಸ್ತಾನಗಳನ್ನು ಎತ್ತರ ಸ್ಥಳದಲ್ಲಿ ಸಂಗ್ರಹಣೆ ಮಾಡುವುದು, ದಿನ ನಿತ್ಯ ತರಕಾರಿಗಳನ್ನು ತೊಳೆದು ಹಾಕುವುದು, ಸಮವಸ್ತ್ರಧರಿಸಿ ಅಡುಗೆ ಮಾಡುವುದು, ಶುದ್ಧಕುಡಿವ ನೀರು ಹಾಗೂ ವಿದ್ಯಾರ್ಥಿಗಳು ಸ್ವಚ್ಛವಾಗಿ ಕೈತೊಳೆದು ಊಟ ಮಾಡುವ ಕಡೆಗೆ ಶಿಕ್ಷಕರು ಗಮನ ಹರಿಸಿ, ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ಸರಿಯಾಗಿ ನೀಡಿ, ಅವುಗಳನ್ನು ದಾಖಲೆ ಪುಸ್ತಕದಲ್ಲಿ ನಮೂದಿಸಲು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ ಮಾತನಾಡಿ, ಈಗಗಾಲೇ ತಾಲೂಕಿನ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಮುಖ್ಯ ಅಡುಗೆದಾರರ ಸಭೆ ನಡೆಸಿ ಮುಂಜಾಗ್ರತಾ ಕ್ರಮವಹಿಸಿ ಬಿಸಿಯೂಟ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ತಿಳಿಸಲಾಗಿದೆ ಎಂದರು. ಎ.ಎ. ಖಾಜಿ, ಪಿ.ಎಫ್. ಸೋಲಾಪುರಿ, ಎಸ್.ಎಂ. ಉಕ್ಕಲಿ, ಜಿ.ಡಿ. ಪಂಡಿತ, ಎಸ್.ಬಿ. ಚನವೀರಗೌಡ್ರ ಮುಂತಾದವರು ಉಪಸ್ಥಿತರಿದ್ದರು. ಕುಮಾರ ಹುಲಗೂರ ಸ್ವಾಗತಿಸಿದರು. ಶಾಂತಕುಮಾರ ಭಜಂತ್ರಿ ನಿರೂಪಿಸಿ, ವಂದಿಸಿದರು.

ಮಲ್ಲಮ್ಮ ಪಲ್ಲೇದ ನಿಧನ
ಗಜೇಂದ್ರಗಡ: ಸ್ಥಳೀಯ ನಿವಾಸಿ ಮಲ್ಲಮ್ಮ ಶಿವಪ್ಪ ಪಲ್ಲೇದ (82) ಮಂಗಳವಾರ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದರು.
ಕಳಕಮ್ಮ ಅಬ್ಬಿಗೇರಿ ನಿಧನ
ಗಜೇಂದ್ರಗಡ:  ಸ್ಥಳೀಯ ನಿವಾಸಿ ಕಳಕಮ್ಮ ಶಂಕ್ರಪ್ಪ ಅಬ್ಬಿಗೇರಿ (85) ಮಂಗಳವಾರ ರಾತ್ರಿ ನಿಧನರಾದರು. ಮೃತರಿಗೆ ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement