ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಡಾ. ಆರ್.ಟಿ. ಕುಲಕರ್ಣಿ ಕೊಡುಗೆ ಅವಿಸ್ಮರಣೀಯ

Lingaraj Badiger
Updated On : 3 Aug 2013, 11:14 am

ಗದಗ: ಪ್ರಾಮಾಣಿಕತೆ, ಸರಳತೆ, ನಿಸ್ವಾರ್ಥ ಸೇವೆ ಮೂಲಕ ನಗರದ ಹಿರಿಯ ವೈದ್ಯ ಸಾಮಾಜಿಕ ಕಾರ್ಯಕರ್ತ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ. ಆರ್.ಟಿ. ಕುಲಕರ್ಣಿ ಅವರು, ಸಮಾಜಕ್ಕೆ ನೀಡಿದ ಸೇವಾ ಕೊಡುಗೆ ಅವಿಸ್ಮರಣೀಯ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀ ಹೇಳಿದರು.
ಈಚೆಗೆ ಅವರು ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದಲ್ಲಿ ನಡೆದ 2130ನೇ ಶಿವಾನುಭವದಲ್ಲಿ ಅಮೃತ ಮಹೋತ್ಸವ ನಿಮಿತ್ತ ಡಾ. ಆರ್.ಟಿ. ಕುಲಕರ್ಣಿ ದಂಪತಿಯನ್ನು ಸತ್ಕರಿಸಿ, ಡಾ. ಆರ್.ಟಿ. ಕುಲಕರ್ಣಿ ಅವರು ಬರೆದ ಅವರ ಆತ್ಮಕಥನ ಜೀವನದಿ ಹಾಗೂ ವೈದ್ಯಕೀಯ ಲೇಖನಗಳ ಆರೋಗ್ಯ ಭಾಗ್ಯ ಪುಸ್ತಕಗಳ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.
ವೈದ್ಯಕೀಯ ವೃತ್ತಿಯಲ್ಲಿ ಬಡವರಿಗೆ ಉದಾರ ನೆರವಿನ ಚಿಕಿತ್ಸೆಯ ಜತೆಗೆ ಗದುಗಿನಲ್ಲಿ ಪಂಚಾಕ್ಷರಿ ಗವಾಯಿಗಳು, ಡಾ. ಪುಟ್ಟರಾಜ ಗವಾಯಿಗಳಿಂದ ಬೆಳೆದು ಬಂದ ಗುರುಶಿಷ್ಯ ಪರಂಪರೆಯ ಮಾದರಿಯ ಸಂಗೀತ ಪಾಠಶಾಲೆ ವೀರೇಶ್ವರ ಪುಣ್ಯಾಶ್ರಮಕ್ಕೆ ಅಂತರ್ ರಾಷ್ಟ್ರೀಯ ರೋಟರಿಯಿಂದ ಅಂದಿನ ಕಾಲದಲ್ಲಿ ನೆರವು ತಂದು ಸುಸಜ್ಜಿತವಾದ ವಿದ್ಯಾರ್ಥಿ ವಸತಿ ನಿಲಯ ಕಟ್ಟಿಸಿದ ಕೀರ್ತಿ ಡಾ. ಕುಲಕರ್ಣಿ ಅವರದ್ದಾಗಿದೆ.  ನಗರದಲ್ಲಿ ರೋಟರಿಯಿಂದ ಜನತೆಗೆ ಉಚಿತ ನೇತ್ರ ವೈದ್ಯಕೀಯ ಸೇವೆಗೆಂದು ಸುಸಜ್ಜಿತ ಐ ಕೇರ್ ಸೆಂಟರ್ ನಿರ್ಮಾಣ, ರೋಟರಿ ಮೂಲಕ ನಗರದ ಶಾಲಾ ಕಾಲೇಜುಗಳಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರಿನ ಯೋಜನೆಗೆ ಕಾಯಕಲ್ಪ ನೀಡಿದ್ದು, ಬಸವ ಕೇಂದ್ರದ ಮೂಲಕ ನಗರದ ವಿವಿಧೆಡೆ ಪರಿಸರ ದಿನಾಚರಣೆ ನಿಮಿತ್ತ ಸಾವಿರಾರು ಗಿಡಮರಗಳನ್ನು ನೆಟ್ಟು ಅವುಗಳನ್ನು ಯಶಸ್ವಿಯಾಗಿ ಬೆಳೆಸಿದ್ದು, ಅವರ ಸೇವಾ ಸಾಧನೆಗೆ ನಿದರ್ಶನ ಎಂದರು.
ಯೋಗ ಸಾಧಕ ವಚನಾನಂದ ಶ್ರೀಗಳು ಮಾತನಾಡಿದರು. ಸಾಹಿತಿ ಹಾಗೂ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಎರಡೂ ಪುಸ್ತಕಗಳ ಪರಿಚಯ ನೀಡಿದರು. ಸಿದ್ಧಲಿಂಗೇಶ ಚಳ್ಳಮರದ, ಡಾ. ಎನ್.ಬಿ.ಪಾಟೀಲ, ಅನಂತ ಶಿವಪುರ, ಡಾ. ರಾಜಶೇಖರ ಬಳ್ಳಾರಿ, ಲಿಂಗಾಯತ ರುದ್ರಭೂಮಿ ಸಮಿತಿ ಕಾರ್ಯದರ್ಶಿ ಕೆ.ಎಸ್. ಚೆಟ್ಟಿ, ಚಂದ್ರಣ್ಣ ಹುಣಸಿಕಟ್ಟಿ, ಎಂ.ಎಸ್. ಪಾಟೀಲ ಬಸವ ಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಯಾಳ, ಗಿರೀಶ ಮಾನ್ವಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಕಾರ್ಯದರ್ಶಿ ವೀರಣ್ಣ ಹೊನಗಣ್ಣವರ, ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ ಮುಂತಾದವರು ಪಾಲ್ಗೊಂಡಿದ್ದರು. ಶಿವಾನುಭವ ಸಮಿತಿ ಚೇರ್ಮನ್ ಪ್ರೊ. ಎಸ್.ಎನ್. ಆದಿ ಸ್ವಾಗತಿಸಿದರು. ಪ್ರೊ. ನಾಯಕ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement