ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಸ್ ಅವ್ಯವಸ್ಥೆ: ವಿದ್ಯಾರ್ಥಿಗಳ ಪ್ರತಿಭಟನೆ

Lingaraj Badiger
Updated On : 3 Aug 2013, 11:01 am

ಲಕ್ಷ್ಮೇಶ್ವರ: ಅಸಮರ್ಪಕ ಬಸ್ ವ್ಯವಸ್ಥೆಯಿಂದ ತೊಂದರೆಯಾಗುತ್ತಿದೆ ಎಂದು ಶುಕ್ರವಾರ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ನಾಯಿಕೆರೂರ, ಕಡಕೋಳ, ವಡ್ನಿಕೊಪ್ಪ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪಟ್ಣಣದ ಸುತ್ತಮುತ್ತಲಿನ ಗ್ರಾಮಸ್ಥರು, ವಿದ್ಯಾರ್ಥಿಗಳು ಲಕ್ಷ್ಮೇಶ್ವಕ್ಕೆ ನಿತ್ಯ ಬರುತ್ತಾರೆ. ಆದರೆ, ಸರಿಯಾದ ಬಸ್ ಸೌಕರ್ಯವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಎಲ್ಲ ಕಾಲೇಜುಗಳ, ಶಾಲಾ ಪ್ರಾರಂಭದ ವೇಳೆಯು ಬೇರೆ ಬೇರೆಯಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ಅನಾನುಕೂಲತೆಯಿಂದ ಪರದಾಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಗೆ ಬರಲು ಈ ಗ್ರಾಮಗಳಿಂದ ಯಾವುದೇ ಬಸ್ ಸೌಕರ್ಯವಿಲ್ಲದ್ದರಿಂದ ಲಕ್ಷ್ಮೇಶ್ವರ ತಲುಪಲು ಸುಮಾರು 9 ಗಂಟೆ ಬೇಕಾಗುತ್ತದೆ. ಅದಾಗಲೇ ಮೊದಲಿನ 2 ಅವಧಿಯ ಕ್ಲಾಸ್ಗಳಿಗೆ ಹಾಜರಾಗಲು ಸಾಧ್ಯವಾಗದೇ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗುತ್ತಿದೆ. ಸಾಕಷ್ಟು ವೇಳೆಯನ್ನು ಬಸ್ ನಿಲ್ದಾಣದಲ್ಲಿಯೇ ಕಳೆಯಬೇಕಾಗುತ್ತದೆ ಎಂದು ಕಡಕೋಳ, ಕಲಿವಾಳ, ಕೃಷ್ಣಾಪುರ ನಾಯಿಕೆರೂರ, ಹೂವಿನಶಿಗ್ಲಿ, ಹೆಸರೂರ, ಶಿಗ್ಲಿ ಗ್ರಾಮಗಳ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು.
ಶೀಘ್ರ ವ್ಯವಸ್ಥೆ: ಈ ಕುರಿತು ಲಕ್ಷ್ಮೇಶ್ವರ ಘಟಕ ವ್ಯವಸ್ಥಾಪಕರನ್ನು ಸಂಪರ್ಕಿಸಿದರೆ, ಹದಗೆಟ್ಟ ರಸ್ತೆಗಳಿಂದ ಬಸ್ಗಳು ವಿಳಂಬವಾಗುತ್ತಿದ್ದು, ಶಾಲಾ-ಕಾಲೇಜುಗಳ ವೇಳೆಯಲ್ಲಿ ಗಣನೀಯ ವ್ಯತ್ಯಾಸಗಳಿದ್ದರಿಂದ ಎಲ್ಲ ವಿದ್ಯಾರ್ಥಿಗಳಿಗೂ ಸರಿಯಾದ ವೇಳೆಯಲ್ಲಿಯೇ ಬಸ್ ಸೌಕರ್ಯ ಒದಗಿಸುವಲ್ಲಿ ಸ್ವಲ್ಪ ತೊಂದರೆಯಾಗುತ್ತಿದ್ದು, ಕೂಡಲೇ ಸಮರ್ಪಕ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement