ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗದಗ ಜನರ ಪ್ರೀತಿ ಎಂದಿಗೂ ಮರೆಯಲ್ಲ: ಬಿ. ಶ್ರೀರಾಮುಲು

Mainashree
Updated On : 4 Aug 2013, 1:17 am

ಗದಗ: ಗದಗ ಜಿಲ್ಲೆಯ ಜನತೆಯ ಪ್ರೀತಿಯನ್ನು ನಾನು ಎಂದಿಗೂ ಮರೆಯಲಾರೆ, ಜಿಲ್ಲೆಗೆ ಹಲವಾರು ಜನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದು ಹೋದರೂ ನನ್ನಷ್ಟು ಯಾರಿಗೂ ಆತ್ಮೀಯತೆ ತೋರಿಲ್ಲ. ಇದಕ್ಕೆ ನಾನು ಋಣಿ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದರು.  ಅವರು ಶನಿವಾರ ರಾತ್ರಿ ನಗರದ ಜುಮ್ಮಾ ಮಸೀದಿ ಸಮೀಪದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದರು. ಇಲ್ಲಿನ ಜನತೆ ನನ್ನನ್ನು ತಮ್ಮ ಮನೆ ಮಗನಂತೆ ಪೋಷಿಸಿ ಬೆಳೆಸಿದ್ದಾರೆ. ಈಚೆಗೆ ಜರುಗಿದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಸೋಲು ಅನುಭವಿಸಿರಬಹುದು. ಆದರೆ ಚುನಾವಣೆಯಲ್ಲಿ ಸೋಲು ಗೆಲವು ಸಾಮಾನ್ಯ. ಕಾರ್ಯಕರ್ತರು ಅದಕ್ಕೆಲ್ಲ ಗೊಂದಲಕ್ಕೊಳಗಾಗದೇ ಕೆಲಸ ಮಾಡಬೇಕು ಎಂದರು. ನಂತರ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡ ಸದಸ್ಯರಿಗೆ ಊಟ ಬಡಿಸುವ ಮೂಲಕ ಚಾಲನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement