ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪ್ರಧಾನ ಕಾರ್ಯದರ್ಶಿಯಾಗಿ ನೀಲಗುಂದ ಆಯ್ಕೆ

Mainashree
Updated On : 4 Aug 2013, 1:18 am

ಹೊಳೆಆಲೂರ: ಸ್ಥಳೀಯ ಕಲ್ಮೇಶ್ವರ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2013-14ನೇ ಸಾಲಿನ ಮಹಾವಿದ್ಯಾಲಯದ ಪ್ರಧಾನ ಕಾರ್ಯದರ್ಶಿಯಾಗಿ 5ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ನೂರಜಾನ ನೀಲಗುಂದ ಆಯ್ಕೆಯಾಗಿದ್ದಾರೆ.
ಶುಕ್ರವಾರ ಪ್ರಾಚಾರ್ಯ ಎಸ್.ಎಸ್. ಪಟ್ಟಣಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ವರ್ಷ ಹೆಚ್ಚು ಅಂಕ ಪಡೆದು ವರ್ಗಕ್ಕೆ ಪ್ರಥಮರಾಗಿದ್ದ ವಿದ್ಯಾರ್ಥಿಗಳನ್ನು ವಿವಿಧ ವಿಭಾಗಗಳ ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಲಾಯಿತು. ಮಹಿಳಾ ಕಾರ್ಯದರ್ಶಿಯಾಗಿ ಪ್ರತಿಭಾ ವಕ್ಕುಂದ, ಇತರೆ ವಿಭಾಗಗಳಿಗೆ ಎಂ.ಎಲ್. ಕಪ್ಪಲಿ, ಎನ್.ವಿ. ಯಾವಗಲ್ಲಮಠ, ರಷ್ಮಿ ಬಾರಕೇರ, ಪ್ರಿಯಾ ಕರಮುಡಿ, ಉಷಾ ಜಾಧವ, ವಿಶಾಲಾಕ್ಷಿ ಪರಸನಗೌಡರ, ಸೌಮ್ಯ ಮುಳಗುಂದ ಆಯ್ಕೆಗೊಂಡರು. ಸಭೆಯಲ್ಲಿ ಸಿಬ್ಬಂದಿ ಕಾರ್ಯದರ್ಶಿ ಡಾ. ಎಸ್.ಬಿ. ಸಜ್ಜನರ, ಪ್ರೊ. ಎನ್.ಆರ್. ಹಿರೇಸಕ್ಕರಗೌಡರ, ಪ್ರೊ. ಜಿ.ವಿ. ಬೀಳಗಿ, ವೈ.ವಿ. ಜಡಮಳಿ, ಸಲ್ಲನಗೌಡ ಪಾಟೀಲ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ವಿಭಾಗಗಳ ಜವಾಬ್ದಾರಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪ್ರಭು ಗಂಜಿಹಾಳ ಸ್ವಾಗತಿಸಿದರು. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಡಾ. ಎಂ.ಎನ್. ಕಡಪಟ್ಟಿ ನಿರೂಪಿಸಿದರು. ಪ್ರೊ. ಎಸ್.ಎಸ್. ಹುರಕಡ್ಲಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement