ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯಿರಿ

Mainashree
Updated On : 4 Aug 2013, 1:18 am

ಕನ್ನಡಪ್ರಭ ವಾರ್ತೆ, ಗದಗ, ಆ. 3
ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಟಂಟಂ ಆಟೋ ಚಾಲಕರು ನಿತ್ಯ ಮಕ್ಕಳನ್ನು ಶಾಲೆಯ ಕರೆದುಕೊಂಡು ಹೋಗುತ್ತಿದ್ದು, ಟಂಟಂ ಮಾಲಕರು ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವಂತೆ ಆಟೋ ಚಾಲಕರಿಗೆ ಪಿಎಸ್‌ಐ ಎಂ.ಬಿ. ಮೋಕಾಶಿ ಕರೆ ನೀಡಿದರು.
ಈಚೆಗೆ ಅವರು ಬೆಟಗೇರಿಯಲ್ಲಿ ಲೋಯಲಾ ಶಾಲೆ, ಸೇಂಟಜಾನ್ ಶಾಲೆ ಇನ್ನೂ ಶಾಲೆಗಳ ಮಕ್ಕಳನ್ನು ಕರೆದೊಯ್ಯುವ ಆಟೋ, ಟಂಟಂ ಚಾಲಕರನ್ನು ಸೇರಿಸಿ ನಡೆಸಿದ ಸಭೆಯಲ್ಲಿ ಈ ಕುರಿತು ಮಾತನಾಡಿದರು. ಆಟೋ ಚಾಲಕರು ಯಾವತ್ತೂ ಮಕ್ಕಳನ್ನು ಕರೆದೊಯ್ಯುವಾಗ ನಿಮ್ಮ ಜತೆಯಲ್ಲಿ ವಾಹನಕ್ಕೆ ಸಂಬಂಧಪಟ್ಟ ಚಾಲನಾ ಪರವಾನಗಿ ಪತ್ರ ಮತ್ತು ವಾಹನದ ವಿಮಾ ಪ್ರಮಾಣ ಪತ್ರ, ರಹದಾರಿ ಪರವಾನಗಿ ಪ್ರಮಾಣ ಪತ್ರ ಹಾಗೂ ಇನ್ನಿತರ ವಾಹನಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಚಲಾಯಿಸಬೇಕು. ವಾಹನವನ್ನು ಚಲಾಯಿಸುವಾಗ ಮಧ್ಯಪಾನ, ಧೂಮ್ರಪಾನ ಮಾಡಬಾರದು. ಅದರ ಜತೆಗೆ ಕಾನೂನಿನ ನಿಯಮ ಪಾಲಿಸಬೇಕು. ವೇಗದ ಮಿತಿಯನ್ನು ಕಾಯ್ದುಕೊಂಡು ಚಾಲನೆ ಮಾಡಬೇಕು. ಇದರಿಂದ ನಿಮ್ಮ ಕುಟುಂಬವು ಕ್ಷೇಮ ಹಾಗೂ ನಿಮ್ಮ ವಾಹನದಲ್ಲಿರುವ ಮಕ್ಕಳೂ ಕ್ಷೇಮ ಎಂದು ಎಲ್ಲ ಆಟೋ ಚಾಲಕರಿಗೆ ತಿಳಿವಳಿಕೆ ಹೇಳಿದರು. ಪೊಲೀಸ್ ಇಲಾಖೆಯ ಕೆ.ಜಿ. ಲಮಾಣಿ, ಎನ್.ಜಿ. ಭರಮಗೌಡ್ರ, ಎಂ.ಬಿ. ಗಡ್ಡಿನ, ಬಡವರ ಬಂಧು ಟಂಟಂ ಆಟೋ ಮಾಲಕರ ಸಂಘದ ಅಧ್ಯಕ್ಷ ರಾಮಣ್ಣ ಕಟ್ನಳ್ಳಿ, ಉಪಾಧ್ಯಕ್ಷ ಬಾಲರಾಜ ಅರಬರ, ಟಂಟಂ ಚಾಲಕ ಯಮನೂರ ಇಳಕಲ್ಲ, ರಾಜು ದುಗ್ಗಾಣಿ, ಕುಮಾರ ಕಮತರ, ಗಂಗಾಧರ ಅಂಗಡಿ ಸೇರಿದಂತೆ ಅನೇಕ ಆಟೋ ಹಾಗೂ ಟಂಟಂ ಚಾಲಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement