18ಕ್ಕೆ ವಾಲ್ಮೀಕಿ ವಧು-ವರರ ಸಮಾವೇಶ
ಗದಗ: ನಗರದ ರಾಜೀವಗಾಂಧಿ ನಗರದ ಎಚ್.ಟಿ. ಕುಲಕರ್ಣಿ ಶಿಕ್ಷಕರ ಬಡಾವಣೆಯಲ್ಲಿರುವ ಮಹರ್ಷಿ ವಾಲ್ಮೀಕಿ ರಿಜನಲ್ ಏಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಕಟ್ಟಡದ ಆವರಣದಲ್ಲಿ ಟ್ರಸ್ಟ್ ಆಶ್ರಯದಲ್ಲಿ ಆ. 18ರ ಬೆಳಗ್ಗೆ 10.30ಕ್ಕೆ ಜಿಲ್ಲಾ ಮಟ್ಟದ ವಾಲ್ಮೀಕಿ-ನಾಯಕ ವಧು-ವರರ ಮಾಹಿತಿ ಸಮಾವೇಶ ನಡೆಯಲಿದೆ.
ವಾಲ್ಮೀಕಿ ಸಮಾಜದ ವಧು-ವರರ ವೈವಾಹಿಕ ಬಂಧನಕ್ಕೆ ನೆರವಾಗುವ ಸಮಾವೇಶದ ನೇತೃತ್ವವನ್ನು ಅಯ್ಯಪ್ಪ ನಾಯ್ಕರ ವಹಿಸುವರು. ಎಚ್.ಆರ್. ಜಾಣಗಾರ, ಎಲ್.ಕೆ. ಹಂಚನಾಳ, ಜಿ.ಎಚ್. ಪೂಜಾರ, ಎಚ್.ಬಿ. ಕುರಹಟ್ಟಿ, ಹನುಮಂತಪ್ಪ ಶಿರೋಳ, ಮಹಾದೇವಪ್ಪ ತಿರಕಣ್ಣವರ, ಬಿ.ಎಚ್. ಬಗರಿ, ವೈ.ಬಿ. ಹೆಬ್ಬಾಳ, ಬಸವರಾಜ ಚಿಸಬೇಲಿ, ಸಮಾಜದ ಗುರು ಹಿರಿಯರು ಪಾಲ್ಗೊಳ್ಳುವರು. ಗದಗ, ರೋಣ, ನರಗುಂದ, ಶಿರಹಟ್ಟಿ, ಮುಂಡರಗಿ ತಾಲೂಕುಗಳ ವಾಲ್ಮೀಕಿ-ನಾಯಕ ಸಮಾಜದ ವಧು-ವರರು, ಅವರ ಪಾಲಕರು ಈ ಸಮಾವೇಶದಲ್ಲಿ ವಧು-ವರರ ಭಾವಚಿತ್ರ, ಜನ್ಮ ದಿನಾಂಕ, ವಿದ್ಯಾಭ್ಯಾಸ, ಬೆಡಗು ಇತ್ಯಾದಿ ಉಪಯುಕ್ತ ಮಾಹಿತಿಗಳೊಂದಿಗೆ ಆಗಮಿಸಬೇಕು. ಹೆಚ್ಚಿನ ಮಾಹಿತಿಗೆ ಅಯ್ಯಪ್ಪ ನಾಯ್ಕರ-9980410269, ಮಲ್ಲಿಕಾರ್ಜುನ ಪೂಜಾರ-9591322970, 9972431567 ಇಲ್ಲಿಗೆ ಸಂಪರ್ಕಿಸುವಂತೆ ಸಂಚಾಲಕ ಮಲ್ಲಿಕಾರ್ಜುನ ಪೂಜಾರ ತಿಳಿಸಿದ್ದಾರೆ.