ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅವ್ವ ಸೇವಾ ಟ್ರಸ್ಟ್: ಸ್ವಾಗತ ಸಮಿತಿ ರಚನೆ

Vishwanath S
Updated On : 5 Aug 2013, 12:14 pm

ಗದಗ: ಮಾಜಿ ಸಚಿವ ಬಸವರಾಜ ಹೊರಟ್ಟಿ ನೇತೃತ್ವದ ಅವ್ವ ಸೇವಾ ಟ್ರಸ್ಟ್ ಆಶ್ರಯದಲ್ಲಿ ಆ. 10ರಂದು ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆಯುವ ಬೆಳಗಾವಿ ವಿಭಾಗ ಮಟ್ಟದ ಅಂಧ ಅಂಗವಿಕಲ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಗಳನ್ನು ರಚಿಸಲಾಗಿದೆ ಎಂದು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಬಸವರಾಜ ಧಾರವಾಡ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಡಿ.ಬಿ. ಹುಯಿಲಗೋಳ, ಅಧ್ಯಕ್ಷರಾಗಿ ಎ.ಎನ್. ನಾಗರಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಬಸವರಾಜ ಧಾರವಾಡ, ಕಾರ್ಯದರ್ಶಿಯಾಗಿ ಎಸ್.ಎಂ. ಕೊಟಗಿ, ಉಪಾಧ್ಯಕ್ಷರಾಗಿ ಎಸ್.ಎನ್. ಖಾಜಿ, ಶ್ರೀನಿವಾಸ ಹುಯಿಲಗೋಳ, ಅಶೋಕ ಜೈನ್, ಪ್ರಾ. ಎಸ್.ಎಸ್. ಪಟ್ಟಣಶೆಟ್ಟಿ, ಪ್ರಾ. ಬಿ.ಎಫ್. ಚೇಗರಡ್ಡಿ, ಸದಸ್ಯರಾಗಿ ಎಂ.ಎಸ್. ಚಿನ್ನೂರ, ಕೆ.ಬಿ. ಭಜಂತ್ರಿ, ಬಿ.ಕೆ. ನಿಂಬನಗೌಡ್ರ, ಜೆ.ಟಿ. ನರಗುಂದ, ಬಿ.ಆರ್. ಪಾಟೀಲ, ಎಸ್.ಬಿ. ಪಾಟೀಲ. ಆರ್.ಎಸ್. ಪವಾರ, ಎಂ.ಎಚ್. ಹಂಗನಕಟ್ಟಿ, ಎಸ್.ಬಿ. ಹೊನವಾಡ, ಡಿ.ಬಿ. ಪಾಟೀಲ, ಎಸ್.ಬಿ. ಅಬ್ಬಿಗೇರಿ, ಎಸ್.ವೈ. ಅಣ್ಣಿಗೇರಿ, ಎಂ.ಕೆ. ಲಮಾಣಿ, ಎಂ.ಎನ್. ನೆಗಳೂರ, ಎಚ್.ಬಿ. ರಡ್ಡೇರ, ಆರ್.ಎಂ. ನವಲೆ, ಎಂ.ಎಚ್. ಬೆಳ್ಳಿಗಟ್ಟಿ, ಡಿ.ಎಫ್. ಹಿತ್ತಲಮನಿ, ಡಿ.ಜಿ. ಪೂಜಾರ, ಎಸ್.ಎಂ. ಅಗಡಿ, ಎಂ.ಕೆ. ಬಡಿಗೇರ, ಎಸ್.ಎಂ. ಹೊಸಮನಿ, ಆರ್.ಎಲ್. ಬದಾಮಿ, ಎಸ್.ಎಂ. ಪಾಟೀಲ, ವಿ.ಎಂ. ಹಿರೇಮಠ, ಐ.ಎಚ್. ಹಳ್ಯಾಳ, ಕೆ.ಎಫ್. ಹಳ್ಯಾಳ, ಎಸ್.ಆರ್. ಮೋದಿ, ಎಂ.ಪಿ. ಮುಳಗುಂದ. ಊಟ ಉಪಹಾರ ಸಮಿತಿಗೆ ಶ್ರೀನಿವಾಸ ಹುಯಿಲಗೋಳ ಹಾಗೂ ವಿದ್ಯಾದಾನ ಸಮಿತಿಯ ಸರ್ವ ಸದಸ್ಯರು, ವೇದಿಕೆ ಅಲಂಕಾರ ಸಮಿತಿಗೆ ಅಶೋಕ ಅಕ್ಕಿ ಹಾಗೂ ವಿಜಯಕಲಾ ಮಂದಿರದ ಸಿಬ್ಬಂದಿ ಹಾಗೂ ಶಹಜಾನ ಮುದಕವಿ, ನೋಂದಣಿ ಸಮಿತಿ ಮಹಾರಾಣಾ ಪ್ರತಾಪಸಿಂಹ ಮಹಾವಿದ್ಯಾಲಯದ ಸಿಬ್ಬಂದಿ, ಕಾರ್ಯಕ್ರಮ ನಿರ್ವಹಣೆ ಗಣೇಶಸಿಂಗ್ ಬ್ಯಾಳಿ, ಪ್ರಚಾರ ಸಮಿತಿಗೆ ಪ್ರೊ. ಎಸ್.ಎನ್. ಆದಿ, ಪ್ರೊ. ದತ್ತಪ್ರಸನ್ನ ಪಾಟೀಲ, ಅರುಣ ಕುಲಕರ್ಣಿ ಅವರನ್ನು ನೇಮಕಗೊಳಿಸಲಾಗಿದೆ ಎಂದು ಡಾ. ಬಸವರಾಜ ಧಾರವಾಡ ತಿಳಿಸಿದ್ದಾರೆ.
ಯಶಸ್ವಿನಿ ಸ್ಕೀಂ ನವೀಕರಣಮಾಡಲು 31 ಕೊನೆ ದಿನ
ಗದಗ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬೆಟಗೇರಿ ನಂ. 2 ವತಿಯಿಂದ ಯಶಸ್ವಿನಿ ಯೋಜನೆಯ ನವೀಕರಣ ಮಾಡಲಾಗುವುದು. ನವೀಕರಣ ಮಾಡಲು ಆ. 31ಕೊನೆಯ ದಿನವಾಗಿದೆ. ಮತ್ತು ಹೊಸದಾಗಿ ಈ ಯೋಜನೆಯಡಿಯಲ್ಲಿ ಹೆಸರನ್ನು ನೋಂದಾಯಿಸಲು ಅಕ್ಟೋಬರ್ 15ರ ವರೆಗೆ ಕಾಲಾವಕಾಶವಿದೆ. ಸಂಬಂಧಪಟ್ಟ ಷೇರುದಾರರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಘದ ಅಧ್ಯಕ್ಷ ಮಹೇಶ ಕರಬಿಷ್ಟಿ (9739934859) ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement