ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪುತ್ಥಳಿ ಭಗ್ನ ನೋವು ತಂದಿದೆ: ಎಚ್ಕೆ

Lingaraj Badiger
Updated On : 6 Aug 2013, 11:59 am

ಗದಗ: ಗಾಂಧೀಜಿ ಪುತ್ಥಳಿ ಭಗ್ನಗೊಳಿಸಿರುವುದು ಪ್ರಜ್ಞಾವಂತ ನಾಗರಿಕರಿಗೆ ನೋವು ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ವಿಷಾದ ವ್ಯಕ್ತಪಡಿಸಿದರು.
ಸೋಮವಾರ ತಾಲೂಕಿನ ಅಡವಿಸೋಮಾಪುರದಲ್ಲಿ ಗಾಂಧೀಜಿ ಪುತ್ಥಳಿ ಭಗ್ನಗೊಳಿಸಿದ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಿಸಿದರು.
ಬಳಿಕ ಮಾತನಾಡಿ, ಪುತ್ಥಳಿ ಭಗ್ನ ಶಾಂತಿಗೆ ಭಂಗ ಆಗಿರುವ ಘಟನೆಯಾಗಿದ್ದು, ಅಪರಾಧಿಗಳನ್ನು ಬಂಧಿಸಿರುವುದು ಸಂತಸ ತಂದಿದೆ. ಎಲ್ಲ ನಾಗರಿಕರು ಗ್ರಾಮದಲ್ಲಿ ಶಾಂತತೆ ಕಾಪಾಡಬೇಕು. ಸದ್ಯ ಗ್ರಾಮದಲ್ಲಿ ಶಾಂತಿ ನೆಲೆಸಿದ್ದು, ಎಲ್ಲ ನಾಗರಿಕರು ಕೂಡಿ ವಿಕೃತ ಮನಸ್ಸನ್ನು ಪರಿವರ್ತನೆ ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಈಗಾಗಲೇ ಗ್ರಾಮ ಪಂಚಾಯಿತಿಯಿಂದ ಪುತ್ಥಳಿ ಸ್ಥಾಪನೆಗಾಗಿ ಕ್ರಮಕೈಗೊಂಡಿದ್ದು, ಶೀಘ್ರ ಪುತ್ಥಳಿ ಮರು ಪ್ರತಿಷ್ಠಾಪನೆ ಆಗಬೇಕು ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ಗದಗ ಶಹರ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಗುರಣ್ಣ ಬಳಗಾನೂರ, ಕೆಪಿಸಿಸಿ ಸದಸ್ಯ ವಾಸಣ್ಣ ಕುರಡಗಿ, ವಕೀಲ ಎಸ್.ಕೆ. ಪಾಟೀಲ, ಪರಣ್ಣ ಬಂದಕ್ಕನವರ, ಗದಗ ಯುಥ್ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ಅಶೋಕ ಮಂದಾಲಿ, ಉಮರಫಾರೂಕ ಹುಬ್ಬಳ್ಳಿ, ಭೀಮಸಿಂಗ್ ರಾಠೋಡ, ಅಂದಪ್ಪ ಕಣವಿ, ಗಣೇಶ ಜಡಿ, ಗ್ರಾಪಂ ಸದಸ್ಯ ಫಕೀರಪ್ಪ ಜಡಿ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement