ಸಾಂಘಿಕ ಸಂಘಟನೆ ಜ್ಞಾನ ಪ್ರಸಾರದ ಕೇಂದ್ರ: ವಸ್ತ್ರದ
ಗದಗ: ಸಾಂಘಿಕ ಸಂಘಟನೆ ಜ್ಞಾನ ಪ್ರಸಾರದ ಕೇಂದ್ರಶಕ್ತಿ, ಅದರ ರಕ್ಷಣೆಗೆ ನಾವು ಬದ್ಧರಾಗಿ ದೇಶದ ಪ್ರಗತಿಗೆ ಕಾರಣೀಕರ್ತರಾಗಬೇಕು ಎಂದು ಪ್ರೊ. ಚಂದ್ರಶೇಖರ ವಸ್ತ್ರದ ಹೇಳಿದರು.
ಈಚೆಗೆ ಅವರು ನಗರದ ಕೆಎಸ್‌ಎಸ್ ಕಾಲೇಜಿನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಹಾಗೂ ಗದಗ ಸ್ನಾತಕೋತ್ತರ ಕೇಂದ್ರದ ಸಾಂಘಿಕ ಕ್ರೀಡಾ ಸಂಪತ್ತು ಹಾಗೂ ಎನ್ನೆಸ್ಸೆಸ್ ಚಟುವಟಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಂಘಿಕ ಶಕ್ತಿಯಲ್ಲಿ ಒಂದು ತೇಜಸ್ಸು ಇರುತ್ತದೆ. ಪ್ರತಿ ವಿದ್ಯಾರ್ಥಿ ಸೇವಾ ಮನೋಭಾವವನ್ನು ಮೂಡಿಸುವ ಕೆಲಸವನ್ನು ಅವಶ್ಯಕವಾಗಿ ಮಾಡಬೇಕಾಗಿದೆ. ಸಂಸ್ಕೃತಿಯ ತಿರುಳು ಗ್ರಾಮೀಣ ಪ್ರದೇಶದಲ್ಲಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಬಿ.ಎಫ್. ದಂಡಿನ ಮಾತನಾಡಿ, ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸಿಕೊಂಡು ಸಚ್ಚಾರಿತ್ರ್ಯರಾಗಿ ಬದುಕನ್ನು ರೂಪಿಸಿಕೊಳ್ಳಬೇಕು. ಗಾಂಧೀಜಿಯವರ ಕನಸಿನ ಕೂಸಾದ ಗ್ರಾಮ ಸ್ವರಾಜ್ಯವನ್ನು ಸಾಕಾರಗೊಳಿಸಲು ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಂಸತ್ ಉಪಾಧ್ಯಕ್ಷ ಪ್ರೊ. ಎಂ.ಎ. ರಾಟಿ, ಡಾ. ಎಂ.ಎಸ್. ನರೇಗಲ್ಲ, ಪ್ರೊ. ಎಚ್.ಎಂ. ಮುನಿಸೊನ್ನೆಗೌಡ, ಡಾ. ಟಿ.ಎನ್. ಗೋಡಿ, ಪ್ರೊ. ಎಸ್.ಎನ್. ಜಾಲಿಹಾಳ, ಉಷಾ ಪೂಜಾರ, ಕುಮಾರ ವಾಸನದ, ವಾಲದ ಮುಂತಾದವರು ಇದ್ದರು. ಎಸ್.ಎಂ. ಪೂಜಾರ ಹಾಗೂ ಪವಿತ್ರಾ ಚಿಮ್ಮಲ ಪ್ರಾರ್ಥಿಸಿದರು. ಪ್ರಾ. ಎಂ.ಎಸ್. ಕಾಮನಹಳ್ಳಿ ಸ್ವಾಗತಿಸಿದರು. ಪ್ರೊ. ಬಿ.ವಿ. ರಾಧಾಕೃಷ್ಣ ನಿರೂಪಿಸಿದರು. ಡಾ. ಎನ್.ಎಂ. ಅಂಬಲಿ ವಂದಿಸಿದರು.
ಕಾಂಗ್ರೆಸ್‌ಗೆ ಸೇರ್ಪಡೆ
ರೋಣ: ರೋಣ ಮತಕ್ಷೇತ್ರ ವ್ಯಾಪ್ತಿಯ ಹರ್ಲಾಪುರ ಗ್ರಾಪಂ ಸದಸ್ಯ ಕೆ.ಜಿ. ಲಕ್ಕುಂಡಿ, ಜಗದೀಶಗೌಡ ಗೌಡ್ರ ನೇತೃತ್ವದಲ್ಲಿ ಅನೇಕ ಗ್ರಾಪಂ ಸದಸ್ಯರು ಬಿಜೆಪಿ ತೊರೆದು ಶಾಸಕ ಜಿ.ಎಸ್. ಪಾಟೀಲ ಸಮ್ಮುಖದಲ್ಲಿ ಗುರುವಾರ ಪಟ್ಟಣದ ಪಾಟೀಲರ ನಿವಾಸದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಗ್ರಾಪಂ ಸದಸ್ಯ ಕೆ.ಜಿ. ಲಕ್ಕುಂಡಿ, ಜೆಡಿಎಸ್‌ನ ಮಾಜಿ ತಾಪಂ ಸದಸ್ಯ ಹಾಲಪ್ಪ ಹರ್ತಿ, ಫಕೀರಗೌಡ ಪಾಟೀಲ, ಹನುಮಂತಪ್ಪ ತಾಕಲಕೇರಿ, ಮಹಾದೇವಪ್ಪ ಹಳ್ಳಿಕೇರಿ, ಎಚ್.ಆರ್. ಗದಗ, ಸೋಮನಗೌಡ ಗೌಡ್ರ, ಫಕೀರಸ್ವಾಮಿ ಹರ್ತಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.