ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೈತರ ಸಾಲಮನ್ನಾ ಮಾಡದಿದ್ದರೆ ಹೋರಾಟ: ಪಾಷ

Vishwanath S
Updated On : 7 Aug 2013, 11:02 am

ನರಗುಂದ: ರಾಜ್ಯದಲ್ಲಿ ಸತತ 3 ವರ್ಷದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲದಿಂದ ಈ ಭಾಗದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ರೈತರ ಸಾಲಮನ್ನಾ ಮಾಡದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಅಮೀನ ಪಾಷ ದಿದಗಿ ಹೇಳಿದರು.
ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಲಪ್ರಭಾ ಜಲಾಶಯಕ್ಕೆ 3 ವರ್ಷದಿಂದ ವಾಡಿಕೆಯಷ್ಟು ನೀರು ಬಂದಿಲ್ಲ. ರೈತನಿಗೆ ಬೇಕಾಗುವಷ್ಟು ಮಳೆ ಆಗದಿರುವುದರಿಂದ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮೇಲಾಗಿ ಸುಮಾರು ವರ್ಷಗಳಿಂದ ಕಳಸಾ-ಬಂಡೂರಿ ನಾಲೆಗಳನ್ನು ಮಲಪ್ರಭಾ ಜಲಾಶಯಕ್ಕೆ ಜೋಡಿಸಬೇಕೆಂದು ರೈತರು ಹೋರಾಟ ಮಾಡುತ್ತಿದ್ದರೂ ಸರ್ಕಾರ ಕೇವಲ ಕಾಟಾಚಾರಕ್ಕೆ ಅಲ್ಪ ಪ್ರಮಾಣದ ಹಣ ಬಿಡುಗಡೆ ಮಾಡಿ ಕೈ ತೋಳದುಕೊಂಡಿದೆ. ಇನ್ನು ನೂತನವಾಗಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಯೋಜನೆಗೆ ಆದ್ಯತೆ ನೀಡದಿರುವುದು ಖಂಡನಾರ್ಹವಾಗಿದೆ.
ಕಳಸಾ-ಬಂಡೂರಿ ಯುವ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಸುಮಾರು ವರ್ಷಗಳಿಂದ ಕಳಸಾ-ಬಂಡೂರಿ ನಾಲಾ ಯೋಜನೆ ಬಗ್ಗೆ ಹೋರಾಟ ನಡೆಸಿದರೂ ಕೂಡ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ನಮ್ಮ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಆಶ್ರಯದಲ್ಲಿ ಆ. 14ರಂದು ಗದಗ, ಧಾರವಾಡ, ಬಾಗಲಕೋಟೆ, ಬೆಳಗಾವಿ, ನರಗುಂದ, ನವಲಗುಂದ, ರೋಣ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಬದಾಮಿ, ಗಜೇಂದ್ರಗೌಡ, ಖಾನಾಪುರ ಬಂದ ಕರೆಯಿಟ್ಟು ಸರ್ಕಾರ ವಿರುದ್ಧ ಬೃಹತ್ ಪ್ರತಭಟನೆ ಹಮ್ಮಿಕೊಂಡಿದ್ದೇವೆ ಎಂದರು.
ತಾಲೂಕು ರೈತ ಸಂಘದ ಅಧ್ಯಕ್ಷ ಬಸವರಾಜ ಸಾಬಳೆ, ಬೆಳಗಾವಿ ಜಿಲ್ಲಾ ರೈತಸಂಘ ಅಧ್ಯಕ್ಷ ಬಸವರಾಜ ಮಳಲಿ, ವೆಂಕಟೇಶ, ಧಾರವಾಡ ಮಹಿಳಾ ರೈತ ಸಂಘದ ಜಿಲ್ಲಾಧ್ಯಕ್ಷ ಶೋಭಾ ಚಲವಾದಿ, ನವಲಗುಂದ ತಾಲೂಕು ಮಹಿಳಾಧ್ಯಕ್ಷೆ ಶಂಕ್ರವ್ವ ಕರಕಣ್ಣವರ, ಬಿ.ಎಸ್. ಬಿಲಯಖಾನ, ಶರಣಯ್ಯ ಹಿರೇಮಠ, ಕಲ್ಲಪ್ಪ ಸವದಿ, ಚಂದ್ರಗೌಡ ದ್ಯಾಮನಗೌಡ್ರ, ಉಮೇಶ ಲದ್ದಿ, ಶಿದ್ದಲಿಂಗಪ್ಪ ಅಂಗಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement