ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸೆಪ್ಟೆಂಬರ್‌ನಲ್ಲಿ ಪಂಡಿತ ಪುಟ್ಟರಾಜರ 3ನೇ ಪುಣ್ಯಸ್ಮರಣೆ

Vishwanath S
Updated On : 7 Aug 2013, 11:01 am

ಗದಗ: ಡಾ. ಪಂ.ಪುಟ್ಟರಾಜ ಕವಿ ಗವಾಯಿಗಳವರ 3ನೇ ಪುಣ್ಮ ಸ್ಮರಣೋತ್ಸವವನ್ನು ಸೆಪ್ಟೆಂಬರ್ ತಿಂಗಳಲ್ಲಿ ಸಂಭ್ರಮ ಮತ್ತು ವೈವಿಧ್ಯಮಯವಾಗಿ ಆಚರಿಸಲು ಗಾನಯೋಗಿ ಡಾ. ಪುಟ್ಟರಾಜ ಕಲಾ ಸಂಘ ನಿರ್ಧರಿಸಿದೆ. ಮಂಗಳವಾರ ನಗರದ ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಸಂಘದ ಗೌರವ ಅಧ್ಯಕ್ಷ ಬಸವರಾಜಸ್ವಾಮಿ ಹಿಡ್ಕಿಮಠ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಪುಣ್ಯಸ್ಮರಣೋತ್ಸವ ಹಿನ್ನೆಲೆಯಲ್ಲಿ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಿಂದ, ನಾಡಿನ ಖ್ಯಾತ ಸಂಗೀತ ಕಲಾವಿದರಿಂದ ವೈವಿಧ್ಯಮವಾದ ಸ್ವರಗಾನ ಸಂಜೆ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಪೂಜ್ಯ ಗುರುಗಳಿಗೆ ಸಂಗೀತ ನಮನ ಸಲ್ಲಿಸುವ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಕಾರ್ಯಕ್ರಮದ ದಿನ ಬೆಳಗ್ಗೆ ಪೂಜ್ಯ ಪುಟ್ಟರಾಜರ ಭವ್ಯ ಭಾವಚಿತ್ರವಿಟ್ಟ ಅಲಂಕೃತ ವಾಹನದೊಂದಿಗೆ ಬೃಹತ್ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ವೀರೇಶ್ವರ ಪುಣ್ಯಾಶ್ರಮಕ್ಕೆ ಆಗಮಿಸಿ ಸಭೆಯಾಗಿ ಮಾರ್ಪಡುವದು.
ಸ್ಮರಣೋತ್ಸವದಲ್ಲಿ ಹೆಸರಾಂತ ಹಿರಿಯ ಸಂಗೀತ ಕಲಾವಿದರನ್ನು ಗೌರವಿಸುವ ಯೋಜನೆ ಹೊಂದಲಾಗಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಪುನಃ ಇನ್ನೊಂದು ಪೂರ್ವಭಾವಿ ಸಭೆ ನಡೆಸಿ ಕಾರ್ಯಕ್ರಮವನ್ನು ಅಂತಿಮಗೊಳಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ಹೇಮರಾಜ ಶಾಸ್ತ್ರಿ ಹೆಡಿಗ್ಗೊಂಡ, ಉಪಾಧ್ಯಕ್ಷ ಮಡಿವಾಳೇಶ್ವರಶಾಸ್ತ್ರಿ ಜೇರಟಗಿ, ಮಹಾದೇವಪ್ಪ ಹಳ್ಳಿ, ಶಿವಾನಂದೀಶ್ವರ ಶಾಸ್ತ್ರಿ, ಶರಣಬಸವ ಇಲಕಲ್, ಎಂ.ಜಿ.ಗುರುಸಿದ್ದೇಶ್ವರ ಶಾಸ್ತ್ರಿ, ಸಂಸ್ಥೆಯ ಸದಸ್ಯರು, ಆಶ್ರಮದ ಗುರುಬಂಧುಗಳು, ಅನೇಕ ಸಂಘ ಸಂಸ್ಥೆಯ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು ಎಂದು ಗಾನಯೋಗಿ ಡಾ. ಪುಟ್ಟರಾಜ ಕಲಾ ಸಂಘದ ಕಾರ್ಯದರ್ಶಿ ಶಿವಲಿಂಗಯ್ಯ ಶಾಸ್ತ್ರಿ ಸಿದ್ದಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement