ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮುದಾಯ ಭವನಕ್ಕೆ ಸಹಾಯ

Vishwanath S
Updated On : 8 Aug 2013, 11:57 am

ಗದಗ: ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಈ ನಿಜಸುಖಿ ಹಡಪದ ಅಪ್ಪಣ್ಣವರ ಸಮುದಾಯ ಭವನ ನಿರ್ಮಾಣಕ್ಕೆ ಸಹಾಯ ಸಹಕಾರ ನೀಡುವುದಾಗಿ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಬೆಟಗೇರಿ ನಗರದ ಶರಣಬಸವೇಶ್ವರ ಹೈಸ್ಕೂಲ್ ಸಮೀಪ ನಿರ್ಮಾಣಗೊಳ್ಳುತ್ತಿರುವ ಹಡಪದ ಅಪ್ಪಣ್ಣ ಸಮಾಜದ ಸಮುದಾಯ ಭವನದಲ್ಲಿ ಗದಗ-ಬೆಟಗೇರಿ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಗದಗ ಆಶ್ರಯದಲ್ಲಿ ಜರುಗಿದ ನಿಜಸುಖಿ ಹಡಪದ ಅಪ್ಪಣ್ಣವರ, ನಿಜಮುಕ್ತೆ ಲಿಂಗಮ್ಮನವರ, ಹಡಪದ ರೇಚಣ್ಣನವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಹಡಪದ ಅಪ್ಪಣ್ಣ ಸಮಾಜ ಬಾಂಧವರ ಸಹಕಾರ ಮತ್ತು ಸಹಾಯದಿಂದ ಸುಸಜ್ಜಿತವಾದ ಹಡಪದ ಅಪ್ಪಣ್ಣನವರ ಸಮುದಾಯ ಭವನ ನಿರ್ಮಾಣಗೊಳ್ಳುತ್ತಿರುವುದು ಸಂತಸದ ವಿಷಯ. ಈ ಸಮುದಾಯ ಭವನ ಪೂರ್ಣಗೊಳಿಸಲು ಸರ್ಕಾರದಿಂದ ದೊರೆಯಬಹುದಾದ ಎಲ್ಲ ಸೌಲಭ್ಯ ನೀಡಲಾಗುವುದು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ನಿರ್ಮಿಸಲಾಗುವ ಹಡಪದ ಅಪ್ಪಣನವರ ಸಮುದಾಯ ಭವನಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸುವುದಾಗಿ ಸಚಿವ ಪಾಟೀಲ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ತಂಗಡಗಿ ಹಡಪದ ಅಪ್ಪಣ್ಣ ದೇವರ ಸಂಸ್ಥಾನಮಠದ ಅನ್ನದಾನ ಭಾರತಿ ಅಪ್ಪಣ್ಣ ಶ್ರೀಗಳು, ಅಧ್ಯಕ್ಷತೆ ವಹಿಸಿದ್ದ ಗದಗ-ಬೆಟಗೇರಿ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಟಿ.ವೈ. ಹಡಪದ ಮಾತನಾಡಿ, ಕದಳಿ ಮಠದ ಅಕ್ಕಮಹಾದೇವಿ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಜಿ. ಅಣ್ಣಿಗೇರಿ ಗುರುಗಳು ಮಾತನಾಡಿದರು.
ವೀರಣ್ಣ ಹಡಪದ, ದೇವು ಹಡಪದ, ಮಲ್ಲಪ್ಪ ಹಡಪದ, ರಾಮಣ್ಣ ದಂಡಮ್ಮನವರ, ಬಸಪ್ಪ ನಾವಿ, ನಗರಸಭೆಯ ಮಾಜಿ ಸದಸ್ಯ ಫಕೀರಪ್ಪ ಹೆಬಸೂರ, ಶಿಕ್ಷಕ ಬಿ.ಜಿ. ಹಾವಣಗಿ, ಗಜೇಂದ್ರಗಡ ಪುರಸಭೆ ಸದಸ್ಯ ಎಂ.ಎಸ್. ಹಡಪದ, ಬಸವರಾಜ ಹಡಪದ, ವೀರಭದ್ರಪ್ಪ ಇಟಗಿ, ರಾಮಣ್ಣ ಗುಜಮಾಗಡಿ, ರುದ್ರಪ್ಪ ಕಣವಿ, ಚಂದ್ರಶೇಖರಪ್ಪ ಹಡಪದ, ವಿರುಪಾಕ್ಷಪ್ಪ ಕೊಣ್ಣೂರ, ಶಂಕರಪ್ಪ ಅಣ್ಣಿಗೇರಿ, ಶರಣಬಸಪ್ಪ ಕಟ್ಟಿಮನಿ, ಸೋಮಣ್ಣ ಶಿರಹಟ್ಟಿ, ಶಿವಲೀಲಾ ಇಟಗಿ, ಸಂಜೀವ ಇಟಗಿ, ಮಹೇಶ ಇಟಗಿ, ಭೀಮಪ್ಪ ಚನ್ನಬಸಪ್ಪ ಇಟಗಿ, ತೋಟಪ್ಪ ಇಟಗಿ, ಹುಚ್ಚಪ್ಪ ಹಡಪದ, ಗವಿಸಿದ್ದಪ್ಪ ಹಡಪದ ಇದ್ದರು.
ಶ್ರೀನಿವಾಸ ಹಡಪದ ಸ್ವಾಗತಿಸಿದರು. ಗುರುಪಾದಮ್ಮ ಕಾಯಕದ ಮತ್ತು ಶ್ರೀದೇವಿ ಹಡಪದ ನಿರೂಪಿಸಿದರು. ಭೋಜರಾಜ ಹಡಪದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement