ಸಹಕಾರದಿಂದ ಅಭಿವೃದ್ಧಿ ಸಾಧ್ಯ: ಮಲ್ಲಣ್ಣ ಕೋಳೇರಿ
ಹೊಳೆಆಲೂರು: ಎಲ್ಲ ಕ್ಷೇತ್ರಗಳಲ್ಲೂ ಸಹಕಾರ ಮುಖ್ಯವಾಗಿದ್ದು, ಪರಸ್ಪರ ಸಹಕಾರದಿಂದ ಅಭಿವೃದ್ಧಿ ಸಾಧ್ಯ. ಸಂಘದ ಬೆಳವಣಿಗೆಯಲ್ಲಿ ಸದಸ್ಯರ ಪಾತ್ರ ಕೂಡ ಮುಖ್ಯ ಎಂದು ಮಲ್ಲಣ್ಣ ಕೋಳೇರಿ ಹೇಳಿದರು.
ಅವರು ಈಚೆಗೆ ಸ್ಥಳೀಯ ಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿಯ ಮಾಧ್ಯಮಿಕ ಶಾಲಾ ನೌಕರರ ಪತ್ತು ಬೆಳೆಸುವ ಸಹಕಾರಿ ಸಂಘದ ಸಂಘದ ಕಚೇರಿಯಲ್ಲಿ ನಡೆದ 2012-13ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಅತಿಥಿಗಳಾಗಿ ಡಿ.ಎಸ್. ಶೆಲ್ಲಿಕೇರಿ, ಪ್ರಾ. ಎಸ್.ಎಸ್. ಪಟ್ಟಣಶೆಟ್ಟಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಚನ್ನಪ್ಪ ಬೀರನೂರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ 2012-13ನೇ ಸಾಲಿನ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಐ.ಆರ್. ಹಟ್ಟಿ, ಸಿ.ಎಸ್. ಪಂಚಾಳ, ಕಲ್ಲನಗೌಡರ, ಕವಿತಾ ಹಡಪದ, ನಂದಿನಿ ಹಿರೇಸಕ್ಕರಗೌಡರ ಅವರಿಗೆ ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಎಸ್.ಎಚ್. ಕೆಂದೂರ ವಾರ್ಷಿಕ ವರದಿ ವಾಚಿಸಿದರು. ಅಬ್ಬಿಗೇರಿ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಯಚ್ಚರಪ್ಪ ಜಡಮಳಿ ಸ್ವಾಗತಿಸಿದರು. ಪ್ರೊ.ಎನ್.ಎಸ್. ಹುಣಶಿಕಟ್ಟಿ ನಿರೂಪಿಸಿದರು. ಸಿ.ಎ. ಕಲ್ಲನಗೌಡರ ವಂದಿಸಿದರು.