ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೆಮ್ಮದಿ ಬದುಕಿಗೆ ವಚನಾಮೃತ ಅವಶ್ಯ: ಶಾಂತಲಿಂಗ ಶ್ರೀ

Vishwanath S
Updated On : 9 Aug 2013, 11:30 am

ನರಗುಂದ: ವಿಶ್ವಗುರು ಬಸವಣ್ಣನವರು ಮತ್ತು ಅಲ್ಲಮಪ್ರಭುಗಳಂತಹ ಹಲವಾರು ಶರಣರ ವಚನಗಳು ಇಂದಿಗೂ ನೆಮ್ಮದಿಯ ಬದುಕಿಗೆ ದಾರಿ ದೀಪವಾಗಿವೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಶಾಂತಲಿಂಗ ಶ್ರೀ ಹೇಳಿದರು.
ಅವರು ಬುಧವಾರ ಪಟ್ಟಣದ ಬಸವಕೇಂದ್ರ, ಮುರುಘರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟ್, ಕಂಠಿ ಎಜ್ಯುಕೇಶನ್ ಫೌಂಡೇಶನ್, ಬಸವೇಶ್ವರ ವಿದ್ಯಾಲಯ ಕಿರಿಯ ಪ್ರಾಥಮಿಕ ಶಾಲೆ ಇವುಗಳ ಆಶ್ರಯದಲ್ಲಿ ಶ್ರಾವಣ ಮಾಸದ ಒಂದು ತಿಂಗಳವರೆಗೆ ಜರುಗುವ ವಚನಾಮೃತ ಶ್ರಾವಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲ ಸಮುದಾಯದ ಶರಣರು 2 ಲಕ್ಷಕ್ಕೂ ಹೆಚ್ಚು ವಚನಗಳನ್ನು ರಚಿಸಿದರು. ಅಂದಿನ ವಚನ ಕ್ರಾಂತಿಯನ್ನು ಸಹಿಸದ ಬಿಜ್ಜಳ ರಾಜ ಕೆಲ ಜನರ ಕಲಿಕೆಯ ಮಾತನ್ನು ಕೇಳಿ ಶರಣರಿಗೆ ಹಿಂಸೆ ಕೊಡಲಾರಂಭಿಸಿದ ಇದರಿಂದಾಗಿ ಶರಣರು ಜೀವ ಭಯದಿಂದ ಹೆದರಿ ಬೇರೆ ಕಡೆಗೆ ಹೋದರು. ಆಗ ಅವರು ಬಿಟ್ಟುಹೋದ ವಚನಗಳಲ್ಲಿ ಕೇವಲ 26 ಸಾವಿರದಷ್ಟು ವಚನಗಳು ಮಾತ್ರ ದೊರೆತಿದ್ದು, ಇವುಗಳ ಉಳುವಿಗಾಗಿ ಮತ್ತು ಸಮಾಜದ ಒಳಿತಿಗಾಗಿ ಇಂದು ಚಿತ್ರದುರ್ಗದ ಮುರುಘರಾಜೇಂದ್ರ ಶ್ರೀಗಳು ಪ್ರಾಮಾಣಿಕರಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದರು.
ಹೆಬ್ಬಾಳದ ವೀರೇಶ್ವರ ದೇವರ ಹಾಗೂ ಬಸವಕೇಂದ್ರ ಅಧ್ಯಕ್ಷ ಚನ್ನಬಸಪ್ಪ ಕೋರಿ ಉಪನ್ಯಾಸ ನೀಡಿದರು. ಟಿಎಪಿಎಂಸಿ ಅಧ್ಯಕ್ಷ ಎಫ್.ಆರ್. ಪಾಟೀಲ, ಚನ್ನಪ್ಪ ಕಂಠಿ, ಶಿಕ್ಷಕ ಹುಲಗೂರ, ಆರ್.ಎಚ್. ತಿಗಡಿ, ರುದ್ರಪ್ಪ ಗಾಣಿಗೇರ, ಶರಣಪ್ಪ ನಾಗನೂರ, ಹೊಸಗಾಣಗೇರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement