ಮಕ್ಕಳ ಪ್ರಗತಿಗೆ ಕ್ರೀಡೆ ಅವಶ್ಯ: ಶಾಸಕ ಪಾಟೀಲ್
ನರೇಗಲ್ಲ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪಾಠದೊಂದಿಗೆ ಪಠ್ಯೇತರ ಚಟುವಟಿಕೆ ಮುಖ್ಯ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಈಚೆಗೆ ಸ್ಥಳೀಯ ರೇಣುಕಾಚಾರ್ಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಂಚಾಯತ್ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಪಿ.ಎಸ್. ಕೋರದಾನ್ಯಮಠ ಪಥ ಸಂಚಲನವನ್ನು ಸ್ವೀಕರಿಸಿದರು. ನಂತರ ರೇಣುಕಾಚಾರ್ಯ ಶಾಲಾ ವಿದ್ಯಾರ್ಥಿ ಮೆಹಬೂಬ ಸಂಗಡಿಗರು ಕ್ರೀಡಾ ಜ್ಯೋತಿಯನ್ನು ದೈಹಿಕ ಶಿಕ್ಷಣಾಧಿಕಾರಿ ಎಸ್.ವೈ. ಯಡಹಳ್ಳಿ ಬರಮಾಡಿಕೊಂಡರು. ಸಿಇಒ ಪಿ.ಎಚ್. ಕಡಿವಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಎಚ್.ಪರಂಗಿ, ಬಿಆರ್‌ಸಿ ಕೆ.ಎಸ್. ಅಣಗೌಡ್ರ, ಸಿಆರ್‌ಸಿ ಆರ್.ಕೆ. ಗಚ್ಚಿನಮಠ, ಐ.ಆರ್. ಮಲ್ಲಾಪುರ, ರಮೇಶ ಕಳಕೊಣ್ಣವರ, ಸಿ.ಕೆ. ಪಾರಿಗೊಂಡ, ಶರಣಪ್ಪ ಜುಟ್ಲದ ಹಾಗೂ ಎಲ್ಲ ಕ್ಲಸ್ಟರ್ ಮಟ್ಟದ ಮುಖ್ಯೋಪಾಧ್ಯಾಯರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಇದ್ದರು. ಎನ್.ಎಸ್. ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಸುರೇಶ ಹಳ್ಳಿಕೇರಿ ನಿರೂಪಿಸಿದರು. ಅನಿತಾ ಅಣಗೌಡರ ವಂದಿಸಿದರು.