ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಡವರ ಸೇವೆ ನನ್ನ ಗುರಿ: ಉಪ್ಪಾರ

Vishwanath S
Updated On : 10 Aug 2013, 11:51 am

ಕನ್ನಡಪ್ರಭ ವಾರ್ತೆ, ನರಗುಂದ, ಆ. 9
ಸಮಾಜದಲ್ಲಿ ಎಲ್ಲರು ಶ್ರೀಮಂತರಾಗಿರಲು ಸಾಧ್ಯವಿಲ್ಲ. ಅದಕ್ಕೆ ಶ್ರೀಮಂತರಾದವರು ಸ್ವಲ್ಪ ಮಟ್ಟಿಗಾದರೂ ಬಡವರ ಸೇವೆ ಮಾಡಬೇಕು ಎಂದು ಬಿಜೆಪಿ ಯುವ ಮುಖಂಡ ಬಿ.ಎಸ್. ಉಪ್ಪಾರ ಹೇಳಿದರು.
ಅವರು ಗುರುವಾರ ಪಟ್ಟಣದ ಸೋಮಾಪುರ, ದಂಡಾಪುರ, ಜಮಲಾಪುರ, ಲೋದಿ ಗಲ್ಲಿ, ಗುಡ್ಡದ ಕೇರಿ, ವಿನಾಯಕ ನಗರ, ಕಸಬಾ, ಜನಾತ ಪ್ಲಾಟ್‌ಗಳಲ್ಲಿ ಮುಸ್ಲಿಂರಿಗೆ ರಮ್‌ಜಾನ್ ಹಬ್ಬದ ಪ್ರಯುಕ್ತ 500 ಬಡ ಮುಸ್ಲಿಂ ಮಹಿಳೆಯರಿಗೆ ಸೀರೆ ವಿತರಿಸಿ ಮಾತನಾಡಿದರು.
ಸಮಾಜದಲ್ಲಿ ಎಲ್ಲರು ಸಮಾನರು, ವ್ಯಕ್ತಿಗಳು ಮಾಡುವ ವೃತ್ತಿಯ ಮೇಲೆ ಅವರ ಜಾತಿಗಳು ನಿರ್ಧಾರವಾಗಿರುತ್ತವೆ. ಮುಸ್ಲಿಂ ಸಮಾಜದಲ್ಲಿ ಈ ಹಬ್ಬವು ಬಹಳ ಪವಿತ್ರವಾದದ್ದು ಎಂದರು.  ವೀರೇಶ ಶಿರಂದಮಠ, ಆನಂದ ತೊಂಡಿಹಾಳ, ಮಹೇಶ ಸವದತ್ತಿ, ಚನ್ನಬಸಪ್ಪ ಆಲೂರ, ಮಹಬೂಬ ಯಲಿಗಾರ, ಸಂದೀಪ ಸುಬೇದಾರ, ಸಂಜು ಪಾಟೀಲ, ಆನಂದ ಉಪ್ಪಾರ, ಬುಡ್ಡಸಾಬ, ಬಾಬಾಅಲಿ ಮಕಂದರ, ಖಲಂದರ ಖಲೀಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement