ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಸವಣ್ಣ ಜಗದ ಬೆಳಕು: ಹಂಚಿನಾಳ

Vishwanath S
Updated On : 10 Aug 2013, 11:50 am

ಕನ್ನಡಪ್ರಭ ವಾರ್ತೆ, ಗದಗ, ಆ. 9
ಬಸವಣ್ಣ ಕೇವಲ ದಾರ್ಶನಿಕರಲ್ಲ, ಇಹಲೋಕದ ಮಹತ್ವದೊಂದಿಗೆ ಮಾನವಜನ್ಮದ ಶ್ರೇಷ್ಠತೆ ಸಾರಿದ ಈ ಯುಗ-ಜಗದ ಬೆಳಕು ಎಂದು ಹಿರಿಯ ಶರಣ ಜೀವಿ ಎಂ.ಎ. ಹಂಚಿನಾಳ ಹೇಳಿದರು.
ಅವರು ಈಚೆಗೆ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದಲ್ಲಿ ನಡೆದ 2031ನೇ ಶಿವಾನುಭವದಲ್ಲಿ ಪ್ರತಿನಿತ್ಯ ಸಂಜೆ ಶ್ರಾವಣ ಮಾಸ ನಿಮಿತ್ತ ಬಸವಮಹಾದರ್ಶನ ಪ್ರವಚನ ಮಾಲಿಕೆಯಡಿ ನೀಡಿದ ಪ್ರವಚನದಲ್ಲಿ ಹೇಳಿದರು.
ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅನುಪಸ್ಥಿತಿಯಲ್ಲಿ ಕಾರ್ಯಕ್ರಮದ ನೇತೃತ್ವವಹಿಸಿದ್ದ ನಗರದ ಕುಮಾರೇಶ್ವರ ಧಾರ್ಮಿಕ ಪಾಠಶಾಲೆ ಮುಖ್ಯಸ್ಥ ಗಂಗಾಧರ ದೇವರು, ಬಸವಣ್ಣನ ತತ್ವ ಸಿದ್ಧಾಂತಗಳು ವಿಶ್ವದ ಪ್ರಗತಿಪರ ಚಿಂತಕರಿಗೆ ಬರೆದ ಭಾಷ್ಯದಂತಿವೆ, ದೇವರು ಧರ್ಮದ ಹೆಸರಲ್ಲಿ ಅನುಸರಿಸುವ ಅಂಧಾನುಕರಣೆ, ಮೂಢನಂಬಿಕೆಗಳಿಗೆ ತಿಲಾಂಜಲಿ ಇಟ್ಟು ವೈಜ್ಞಾನಿಕ ತಳಹದಿಯ ಧಾರ್ಮಿಕ ಸಾಮಾಜಿಕ ಜೀವನವನ್ನು ಮಾನವ ಸಾಗಿಸಬೇಕೆಂದರೆ ಬಸವಾದಿ ಶರಣರ ತತ್ವಗಳನ್ನು ಅರಿತು ಅನುಸರಿಸುವುದು ಅನಿವಾರ್ಯ ಎಂದರು.
ಕಾರ್ಯಕ್ರಮದಲ್ಲಿ ಶ್ರೀಮಠದ ಕಲಾವಿದರಾದ ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರೆ ಇವರಿಂದ ವಚನ ಸಂಗೀತ ನಡೆಯಿತು. ಪಂ ನಾರಾಯಣ ಹಿರೇಕೊಳಚೆ ಅವರಿಂದ ವಾಯಲಿನ್ ವಾದನ ನಡೆಯಿತು.
ಅಭಿಷೇಕ ಸಂಗಯ್ಯ ಭೂಸನೂರಮಠ ಹಾಗೂ ಓಂಕಾರ ಮೃತ್ಯುಂಜಯ ಹಿರೇಮಠ ಇವರಿಂದ ಧರ್ಮಗ್ರಂಥ ಪಠಣ ಹಾಗೂ ಧರ್ಮಚಿಂತನ ನಡೆಯಿತು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ ಸ್ವಾಗತಿಸಿದರು. ಎಸ್.ಎಂ. ವಾಲಿ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಕಾರ್ಯದರ್ಶಿ ಈರಣ್ಣ ಹೊನಗಣ್ಣವರ, ಖಜಾಂಚಿ ಪ್ರಭಯ್ಯ ಹಿರೇಮಠ ಸೇರಿ ನೂರಾರು ಜನರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement