ರೋಜಾ ಆರೋಗ್ಯಕ್ಕೆ ಉತ್ತಮ: ಪಾಟೀಲ್
ಗಜೇಂದ್ರಗಡ: ರಂಜಾನ್ ಮಾಸದಲ್ಲಿ ಮುಸಲ್ಮಾನ್ ಬಾಂಧವರು ಕೈಗೊಳ್ಳುವ ಉಪವಾಸ (ರೋಜಾ) ವ್ರತ ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಈಚೆಗೆ ಅಂಜುಮನ್ ಇಸ್ಲಾಂ ಕಮಿಟಿಯಿಂದ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮಾಜದಲ್ಲಿ ಶಾಂತಿಯಿಂದ ಭೇದ, ಭಾವ ತೊರೆದು ಸಹೋದರತ್ವದಿಂದ ಬದುಕಿದಾಗ ಧಾರ್ಮಿಕ ಆಚರಣೆಗಳು ಸಾರ್ಥಕಗೊಳ್ಳುತ್ತವೆ. ಈ ಬಾರಿ ವಿಶೇಷವಾಗಿ ಶ್ರಾವಣ ಮಾಸ ಹಾಗೂ ರಂಜಾನ್ ವ್ರತಾಚರಣೆ ಒಟ್ಟಿಗೆ ಆಚರಿಸುತ್ತಿರುವುದು ಸೌಹಾರ್ದತೆಯ ಪ್ರತೀಕ ಎಂದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ಅಶೋಕ ಬಾಗಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ ಮಾತನಾಡಿದರು. ವಿ.ಆರ್. ಗುಡಿಸಾಗರ, ಶಿವರಾಜ ಘೋರ್ಪಡೆ, ಎಸ್.ಎಂ. ಆರಗಿದ್ದಿ, ಯುಸೂಪ್ ಇಟಗಿ, ಎಂ.ಎಚ್. ಕೋಲ್ಕಾರ್, ಚಂಬಣ್ಣ ಚವಡಿ, ಹಾಜಿ ಎ.ಆರ್. ಗೊಡೇಕಾರ, ಎಂ.ಕೆ. ಹಿರೇಹಾಳ, ಪಿ.ಕೆ. ಬಾಗವಾನ, ಉಮರಸಾಬ ಗೊಡೇಕಾರ, ಕೆ.ಡಿ. ಕಟ್ಟಿಮನಿ, ಎ.ಜಿ. ತಾಳಿಕೋಟಿ ಪಾಲ್ಗೊಂಡಿದ್ದರು. ರಂಜಾನ್ ಮಾಸದ ಪ್ರಯುಕ್ತ ಉಪವಾಸ ನಿರತ ಮುಸ್ಲಿಂ ಬಾಂಧವರಿಗೆ ಶಾಸಕ ಜಿ.ಎಸ್. ಪಾಟೀಲ ಸೌಹಾರ್ದ ಇಫ್ತಾರ್ ಕೂಟ ಏರ್ಪಡಿಸಿದ್ದರು. ಫಯಾಜ ತೋಟದ ಸ್ವಾಗತಿಸಿದರು. ಡಿ.ಬಿ. ವಣಗೇರಿ ನಿರೂಪಿಸಿದರು. ದಾವಲಸಾಬ ತಾಳಿಕೋಟಿ ವಂದಿಸಿದರು.