ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕ್ರೀಡೆಯಿಂದ ಆರೋಗ್ಯ ಭಾಗ್ಯ

Vishwanath S
Updated On : 11 Aug 2013, 11:50 am

ಹೊಳೆಆಲೂರ: ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳುವುದು ಅವಶ್ಯ. ಮನುಷ್ಯನ ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾದ ಅಧ್ಯಕ್ಷ ಬಸವಂತ ತಳವಾರ ಹೇಳಿದರು.
ಅವರು ಈಚೆಗೆ ಸ್ಥಳೀಯ ಕಲ್ಮೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಓದಿನ ಜತೆಗೆ ಆಟೋಟಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವ ಮೂಲಕ ಆರೋಗ್ಯಭಾಗ್ಯ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಓದಿನಷ್ಟೇ ಆಟಕ್ಕೂ ಮಹತ್ವ ನೀಡಬೇಕು. ಆರೋಗ್ಯವಂತರಿದ್ದಲ್ಲಿ ಕೆಲಸ ಕಾರ್ಯಗಳಲ್ಲಿ ಉತ್ಸಾಹ ಮೂಡುತ್ತದೆ. ಕ್ರೀಯಾಶೀಲರಾಗಿರಲು ಸಾಧ್ಯವಾಗುತ್ತದೆ. ಅನಾರೋಗ್ಯವಿದ್ದಲ್ಲಿ ಯಾವುದರಲ್ಲೂ ಆಸಕ್ತಿ ಇಲ್ಲವಾಗುತ್ತದೆ. ಇದಕ್ಕಾಗಿ ನಮ್ಮ ದೈಹಿಕತೆಗೆ ಸಾಧ್ಯವಾಗುವಂತಹ ಆಟಗಳಲ್ಲಿ ತೊಡಗಿ ಸತತ ಪ್ರಯತ್ನದ ಮೂಲಕ ಯಶಸ್ಸನ್ನು ಸಾಧಿಸಬೇಕು ಎಂದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಿ.ಜಿ. ಬೀರನೂರ ವಹಿಸಿದ್ದರು.  ತಾಪಂ ಸದಸ್ಯೆ ತಿಪ್ಪವ್ವ ದೊಡಮನಿ, ಗ್ರಾಪಂ ಅಧ್ಯಕ್ಷೆ ಬಸಮ್ಮ ವಸ್ತ್ರದ, ವಿ.ಎಲ್. ಬದಾಮಿ, ಎನ್.ಸಿ. ಹಿರೇಮಠ, ಎ.ಕೆ.ಚೌಡಾಪುರ ಆಗಮಿಸಿದ್ದರು. ಕ್ರೀಡಾಧ್ವಜಾರೋಹಣ ನೆರವೇರಿಸಿದ ಸಿ.ಜಿ. ಬೀರನೂರ ಮಾತನಾಡಿದರು. ಕ್ರೀಡಾಜ್ಯೋತಿಯನ್ನು ಡಿ.ಎಸ್. ಶೆಲ್ಲಿಕೇರಿ ಬೆಳಗಿಸಿದರು. ವೈ.ವಿ. ಗಾಣಿಗೇರ ಸ್ವಾಗತಿಸಿದರು. ಎಂ.ಎಸ್. ಕರಡದ ನಿರೂಪಿಸಿದರು. ಎ.ಎನ್. ನದಾಫ ವಂದಿಸಿದರು. ನಂತರ ನಡೆದ ಸ್ಪರ್ಧೆಗಳಲ್ಲಿ ಅಸೂಟಿ, ಮೆಣಸಗಿ, ಹೊಳೆಮಣ್ಣೂರ, ಹೊಳೆಆಲೂರ, ಬಿ.ಎಸ್. ಬೇಲೇರಿ, ಹುಲ್ಲೂರ, ಬೆನಹಾಳದ ಸೇರಿದಂತೆ ಒಟ್ಟು 10 ಶಾಲೆಯ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement