ಗಣಪತಿ ಮೂರ್ತಿ ಮೆರವಣಿಗೆ
ಗಜೇಂದ್ರಗಡ: ಸ್ಥಳೀಯ ಹಿರೇ ಅಗಸಿ ಬಳಿ ನಿರ್ಮಿಸಿರುವ ಸಾರ್ವಜನಿಕ ಗಣಪತಿ ದೇಗುಲದಲ್ಲಿ ಭಜರಂಗ ಸರ್ಕ್ಲ್ ಹಾಗೂ ಸಾರ್ವಜನಿಕ ಗಣಪತಿ ಸಮಿತಿ ವತಿಯಿಂದ ಶನಿವಾರ ಬಲಮುರಿ ಗಣಪತಿ ಮೂರ್ತಿ ಮೆರವಣಿಗೆ ಸಂಭ್ರಮದಿಂದ ನೆರವೇರಿತು. ಬೆಳಗ್ಗೆ 8 ಗಂಟೆಗೆ ಮಹಾಲಕ್ಷ್ಮಿ ಮಂದಿರದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಜಾಂಜಮೇಳ, ಸಂಗೀತ ವಾದ್ಯ ವೈಭವ, ಭಜನೆ ಜತೆಗೆ ಮಕ್ಕಳ ಕೋಲಾಟ, ನೃತ್ಯ ಗಮನ ಸೆಳೆದವು. ಹಿರೇ ಅಗಸಿ, ಪತ್ತಾರ ಗಲ್ಲಿ, ಹಿರೇ ಬಜಾರ, ಕೊಳ್ಳಿಯವರ ಕತ್ರಿ, ಕಂಬಾರ ಗಲ್ಲಿ, ಜೋಡು ರಸ್ತೆ, ದುರ್ಗಾ ವೃತ್ತದ ಮೂಲಕ ಸಂಚರಿಸಿ ಮರಳಿ ದೇಗುಲ ಸ್ಥಳ ತಲುಪಿತು. ಸಮಿತಿಯ ಅಧ್ಯಕ್ಷ ಚನ್ನಪ್ಪ ರೇವಡಿ, ಸುಭಾಸ ರಾಯಬಾಗಿ, ಭೀಮರಾವ್ ಸೂರ್ಯವಂಶಿ, ವಿಷ್ಣು ಅಂಬೋರೆ, ಕಳಕಪ್ಪ ಹಡಪದ, ರವಿ ಚಿತ್ರಗಾರ, ಕೃಷ್ಣಾಜಿ ಅಂಬೋರೆ, ಪರಸಪ್ಪ ಕಮ್ಮಾರ, ಬಸವರಾಜ ಚಂಗಳಿ, ಶ್ರೀನಿವಾಸ ಕಮ್ಮಾರ, ರಾಜು ಹೆಬ್ಬಾಳಕರ, ನಾಗೇಶ ಪವಾರ, ರಮೇಶ ರಾಯಬಾಗಿ, ಪ್ರಕಾಶ ಚಿತ್ರಗಾರ, ಮೆರವಣಿಗೆ ನೇತೃತ್ವ ವಹಿಸಿದ್ದರು.