ವಿಶ್ವಕರ್ಮ ಮಂಡಳಿ ಸ್ಥಾಪನೆ: ಸ್ವಾಗತ
ಶಿಗ್ಗಾಂವಿ: ವಿಶ್ವಕರ್ಮ ಸಮಾಜ ಅಭಿವೃದ್ಧಿ ನಿಗಮ ಮಂಡಳಿಯನ್ನು ಮಾಡಲು ಶ್ರಮಿಸಿದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜಾಧ್ಯಕ್ಷ ಕೆ.ಪಿ. ನಂಜುಂಡಿಯವರ ಶ್ರಮ ಸಾರ್ಥಕವಾಗಿದೆ ಎಂದು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕಾಳಪ್ಪ ಬಡಿಗೇರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ವಿಶ್ವಕರ್ಮ ಸಮಾಜಕ್ಕಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿಯನ್ನು ಮಂಜೂರಾತಿ ಮಾಡಿಸುವಲ್ಲಿ ಅವರ ಪರಿಶ್ರಮ ಸಾಕಷ್ಟಿದೆ. ಸಮಾಜದಲ್ಲಿ ವಿವಿಧ ವೃತ್ತಿಗಳನ್ನು ನಿರ್ವಹಿಸುತ್ತಿರುವ ವಿಶ್ವಕರ್ಮರಲ್ಲಿ ಸಾಕಷ್ಟು ಬಡವರಿದ್ದು, ಸಮಾಜದ ಅಭಿವೃದ್ಧಿಗೆ ನಿಗಮ ರಚಿಸಿದ ಸರ್ಕಾರದ ನಿರ್ಧಾರವೂ ಸ್ವಾಗತಾರ್ಹ ಎಂದು ನುಡಿದರು.
ಸಮಾಜದ ತಾಲೂಕು ಉಪಾಧ್ಯಕ್ಷ ನಾರಾಯಣಪ್ಪ ಬಡಿಗೇರ, ಶ್ರೀಶೈಲ ಅರ್ಕಸಾಲಿ, ಸಾನಂದ ಕಮ್ಮಾರ, ವೀರಭದ್ರಪ್ಪ ಕಮ್ಮಾರ, ಮೈಲಾರೆಪ್ಪ ಕಮ್ಮಾರ, ಪ್ರಕಾಶ ಬಡಿಗೇರ, ಮೌನೇಶ ಕಮ್ಮಾರ, ದೇವಿಂದ್ರ ಕಮ್ಮಾರ ಉಪಸ್ಥಿತರಿದ್ದರು.
ಅರಳಿದ ಬ್ರಹ್ಮಕಮಲ
ಬೆಟಗೇರಿಯ ಟೆಂಗಿನಕಾಯಿ ಬಜಾರದ ನಿವಾಸಿ ಖೋಕಲೆ ವಿಷ್ಣು ಇವರ ಮನೆಯ ಟೆರಸ್ ಅಂಗಳದಲ್ಲಿ 21 ಬ್ರಹ್ಮ ಕಮಲಗಳು ಶುಕ್ರವಾರ ರಾತ್ರಿ ಅರಳಿವೆ. ಅಲ್ಲದೇ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಕಮಲದ ಹೂವುಗಳು ಅರಳುವುದು ವಿಶೇಷ.