ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಾಮೂಹಿಕ ಕುಂಕುಮಾರ್ಚನೆ ಮಾಡಿ: ಜೋಶಿ

Vishwanath S
Updated On : 11 Aug 2013, 11:50 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಆ. 10
ಲೋಕ ಕಲ್ಯಾಣಾರ್ಥ ಜತೆ ಭಕ್ತರ ಸಂಕಷ್ಟ ನಿವಾರಣೆಗೆ ಕೋಟಿ ಕುಂಕುಮಾರ್ಚನೆ ಸಂಕಲ್ಪ ಮಾಡಿಲಾಗಿದೆ. ಹೀಗಾಗಿ ಮಹಿಳೆಯರು ಲಲಿತಾ ಸಹಸ್ರ ನಾಮಾವಳಿ ಮಂತ್ರ ಸಹಿತ ಸಾಮೂಹಿಕ ಕುಂಕುಮಾರ್ಚನೆ ಮಾಡಲು ಮುಂದಾಗಬೇಕು ಎಂದು ಸೂಡಿ ಯಾಜ್ಞವಲ್ಕ ಆಶ್ರಮದ ಭುಜಂಗಶರ್ಮಾ ಜೋಶಿ ಹೇಳಿದರು.
ಅವರು ಈಚೆಗೆ ಸ್ಥಳೀಯ ಪತ್ತಾರಗಲ್ಲಿಯ ಶ್ರೀರಾಮ ದೇವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಕುಂಕುಮಾರ್ಚನೆ ಸಮಾರಂಭಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಸಾಮೂಹಿಕ ಧಾರ್ಮಿಕ ಕಾರ್ಯಗಳು ಮೇಲಿಂದ ಮೇಲೆ ಜರಗುವುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಬದಕು ನೆಲಸಲಿದೆ. ಪರಧರ್ಮಿಯರ ಕಟ್ಟು ನಿಟ್ಟಿನ ಸಂಪ್ರದಾಯ, ಧರ್ಮಾಚರಣೆ ಮಾದರಿಯಾಗಿಟ್ಟುಕೊಂಡು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯ. ಧರ್ಮ ರಕ್ಷಣೆ ಮುಖ್ಯ ಜವಾಬ್ದಾರಿ ಮಹಿಳೆ ಮೇಲಿದೆ. ವಿದ್ಯಾವಂತ ಮಹಿಳೆಯಿಂದ ಮಾತ್ರ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ. ಭಾರತೀಯ ಪರಂಪರೆಯಲ್ಲಿ ಮಾತೆಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ನಾಡಿನ ವೈವಿಧ್ಯಮಯ ಸಂಸ್ಕೃತಿ, ಉದಾತತ್ತೆ ಪ್ರತಿಬಿಂಬಿಸುವ ಐತಿಹಾಸಿಕ ಪರಂಪರೆ ಉಳಿವಿಗೆ ಮಹಿಳೆಯರು ಪಣ ತೊಡಬೇಕು ಎಂದರು.
ಭಾರತೀಯ ಸ್ಟೇಟ್ ಬ್ಯಾಂಕ್‌ನ ಅಧಿಕಾರಿ ಎಚ್.ಡಿ. ಪಾಟೀಲ ಮಾತನಾಡಿ, ಮಹಿಳೆಯರು ಕುಟುಂಬ ನಿರ್ವಹಣೆ ಜತೆ ಉನ್ನತ ವ್ಯಾಸಂಗ ಶಿಕ್ಷಣ ಪಡೆದು ಎಲ್ಲ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಬೇಕು ಎಂದರು. ಮೈತ್ರೇಯಿ ಮಹಿಳಾ ಮಂಡಳ ಅಧ್ಯಕ್ಷೆ ಲಿಲಿತಕ್ಕ ಕುಲಕರ್ಣಿ, ರಾಮಣ್ಣ ರಾಜಪುರೋಹಿತ, ಆನಂದ ತೈಲಂಗ, ಉಷಾಬಾಯಿ ಕಿಶನ್‌ರಾವ್ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement