ಜನಪ್ರತಿನಿಧಿಗಳ ಧ್ವನಿಯಾಗಿ ಕೆಲಸ ಮಾಡುವೆ: ಪ್ರದೀಪ
ಗದಗ: ಅಭಿವೃದ್ಧಿ ದೃಷ್ಟಿಯಿಂದಾಗಿ ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳ ಧ್ವನಿಯಾಗಿ ಕೆಲಸ ಮಾಡುವೆ ಎಂದು ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಹೇಳಿದರು.
ಅವರು ಭಾನುವಾರ ಲಕ್ಕುಂಡಿ ಗ್ರಾಮದ ಮಹೇಶ ಮುಸ್ಕಿನಬಾವಿ ಅವರ ಮನೆಯಲ್ಲಿ ಸ್ಥಳಿಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಮತಯಾಚನಾ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಸರ್ಕಾರ ತಂದ ಹಲವಾರು ಜನಪ್ರಿಯ ಯೋಜನೆಗಳಿಗೆ ಕಾಂಗ್ರೆಸ್ ಪಕ್ಷ ತಡೆಹಾಕಿ ಸೇಡಿನ ರಾಜಕೀಯ ಮಾಡುತ್ತಿದೆ. ಇದು ಸರಿಯಲ್ಲ. ಬಿಜೆಪಿ ಸರ್ಕಾರದ ಹಲವು ಯೋಜನೆಗಳು ಜನಪ್ರಿಯವಾಗಿರುವುದು ನಮಗೆ ಶ್ರೀರಕ್ಷೆಯಾಗಿದೆ. ಕಾರಣ ಈ ಭಾಗದ ಜನಪ್ರತಿನಿಧಿಗಳು ನನಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡರ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಮಾಜಿ ಅಧ್ಯಕ್ಷೆ ಚಂಬವ್ವ ಪಾಟೀಲ, ವಸಂತ ಮೇಟಿ, ಶಾಂತಪ್ಪ ಕಳಕೇರಿ, ಉಮೇಶಗೌಡ ಪಾಟೀಲ, ವಿ.ಎಸ್. ಪಾಟೀಲ, ಪ್ರಹ್ಲಾದ ಹೊಸಳ್ಳಿ ಮಾತನಾಡಿದರು.
ಸಭೆಯಲ್ಲಿ ಮಾಹಾದೇವಪ್ಪ ಚಿಂಚಲಿ, ಚಂದ್ರು ದಂಡಿನ, ಬಿ.ಬಿ. ಐನಾಪುರ, ಪ್ರದೀಪ ನವಲಗುಂದ, ಸಿದ್ದು ಬಂಡಿವಾಡ, ಗಂಗವ್ವ ಶೆಟ್ಟರ, ನಾಗಮ್ಮ ಹುಡೇದ, ಪ್ರಕಾಶ ಸೂರಣಗಿ, ಕೆಂಚಪ್ಪ ನಾಯ್ಕರ, ಅರವಿಂದ ಹುಲ್ಲೂರ, ಶ್ರೀನಿವಾಸ ಹುಬ್ಬಳ್ಳಿ, ಎಚ್.ಬಿ. ಅಳವಂಡಿ ಮತ್ತಿತರರು ಭಾಗವಹಿಸಿದ್ದರು. ಅಂದಪ್ಪ ತಿಮ್ಮಾಪುರ ಸ್ವಾಗತಿಸಿ, ನಿರೂಪಿಸಿದರು. ಮರಿಪ್ಪ ವಡ್ಡರ ವಂದಿಸಿದರು.