ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವೆಂಕಟಾಪುರ ಅಜ್ಜ ಬಾಳಿಗೆ ಬೆಳಕು

Lingaraj Badiger
Updated On : 12 Aug 2013, 11:29 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 11
ವೆಂಕಟಾಪುರ ಅಜ್ಜನವರು ಲೀಲಾಪುರುಷರಾಗಿದ್ದರು. ಭಕ್ತರ ಇಷ್ಟಾರ್ಥ ಪೂರೈಸಿ ಅನೇಕರ ಬಾಳಿಗೆ ಬೆಳಕು ನೀಡಿದ್ದಾರೆಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಶುಕ್ರವಾರ ರಾತ್ರಿ ಸ್ಥಳೀಯ ಜ. ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿರುವ ಜ. ಅನ್ನದಾನೀಶ್ವರರ ಭವ್ಯ ಜೀವನ ದರ್ಶನ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶ್ರಾವಣ ಮಾಸದಲ್ಲಿ ಶ್ರೀಮಠದಲ್ಲಿ ಶರಣರ ಭವ್ಯ ಜೀವನ ದರ್ಶನ ಪ್ರವಚನ ಹಮ್ಮಿಕೊಂಡು ಜನರ ಮನಸ್ಸಿನಲ್ಲಿನ ಮಲೀನತೆ ದೂರ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದರು. ಸಾನ್ನಿಧ್ಯವಹಿಸಿದ್ದ ಜ.ಡಾ. ಅನ್ನದಾನೀಶ್ವರ ಶ್ರೀಗಳು ಮಾತನಾಡಿ, ಪುರಾಣ-ಪ್ರವಚನಗಳು ಮನುಷ್ಯನ ನಿಜ ಜೀವನದ ಅಂತರಂಗದ ಅರಿವನ್ನು ತೋರ್ಪಡಿಸುವ ಶಕ್ತಿಯನ್ನು ಹೊಂದಿದ್ದು, ಪ್ರತಿಯೊಬ್ಬರೂ ಆಧ್ಯಾತ್ಮಿಕ ಚಿಂತನೆ ಮತ್ತು ಪ್ರವಚನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದರು.
ಹೇಮಗಿರೀಶ ಹಾವಿನಾಳ ಮಾತನಾಡಿದರು. ತಳಕಲ್ ವೀರಣ್ಣ ಶಾಸ್ತ್ರಿಗಳು ಪ್ರವಚನ ಪ್ರಾರಂಭಿಸಿದರು. ಅಡವಳ್ಳಿ ಬಸವರಾಜ ಗವಾಯಿಗಳು ಸಂಗೀತ ಸೇವೆ ನೀಡಿದರು. ನಿರಂಜನ ದೇವರು, ಈಶ್ವರಪ್ಪ ಹಂಚಿನಾಳ, ರಮೇಶಪ್ಪ ಭೂಮರಡ್ಡಿ, ಎ.ಕೆ. ಬೆಲ್ಲದ, ಕರಬಸಪ್ಪ ಹಂಚಿನಾಳ, ಶಂಕ್ರಪ್ಪ ಬಾರಿಕಾಯಿ, ರಾಮಸ್ವಾಮಿ ಹೆಗ್ಗಡಾಳ, ಎಸ್.ಬಿ. ಹಿರೇಮಠ, ಮಂಜುನಾಥ ಗೋಡಿ, ಅಜ್ಜಯ್ಯ ಇಟಗಿಮಠ, ವಿ.ಸಿ. ಹಂಚಿನಾಳ, ಬಸವರಾಜ ಬಿಸನಳ್ಳಿ, ವಿರೇಶ ಸಜ್ಜನರ, ಅಬ್ದುಲ್ ಖುರೇಶಿ, ಎ.ಪಿ.ದಂಡಿನ ಮುಂತಾದವರಿದ್ದರು. ಭಕ್ತಿ ಸೇವೆಯನ್ನು ಸಾಯಿನಾಥ ಅಳವಂಡಿ, ಶ್ರೀಕಾಂತ ಅಳವಂಡಿ, ವೀರಣ್ಣ ಕಾಗನೂರಮಠ, ಬಸವಂತಪ್ಪ ಹೊಸಮನಿ ವಹಿಸಿದ್ದರು. ವಿಶ್ರಾಂತ ಪ್ರಾಚಾರ್ಯ ಎಸ್.ಬಿ. ಕರಿಭರಮಗೌಡ್ರ ಆಶಯ ನುಡಿಗಳನ್ನಾಡಿದರು.ಡಾ೤ ಎಂ.ಬಿ. ಬೆಳವಟಗಿಮಠ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement