ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಂಬಿಗರ ಚೌಡಯ್ಯನವರ ವಿವಿಧೋದ್ದೇಶ ಸಂಸ್ಥೆ ಉದ್ಘಾಟನೆ

Lingaraj Badiger
Updated On : 13 Aug 2013, 10:57 am

ಹೊಳೆಆಲೂರ: ಇಲ್ಲಿನ ರೇಲ್ವೆ ನಿಲ್ದಾಣದ ಸಮೀಪದ ಓಣಿಯಲ್ಲಿ ನೂತನವಾಗಿ ಅಂಬಿಗರ ಚೌಡಯ್ಯನವರ ವಿವಿಧೋದ್ದೇಶ ಸೇವಾ ಸಂಸ್ಥೆಯ ಉದ್ಘಾಟನೆ ಭಾನುವಾರ ಜರುಗಿತು. ಸಂಸ್ಥೆಯ ಅಧ್ಯಕ್ಷ ಬಾಳಪ್ಪ ಅಂಬಿಗೇರ ಅಧ್ಯಕ್ಷತೆ ಹಾಗೂ ನೀಲಕಂಠಯ್ಯ ಹಿರೇಮಠ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಕಾಶಪ್ಪ ಬಳಗಾನೂರ, ಬಸವರಾಜ ಅಂಬಿಗೇರ, ರೇವಣಪ್ಪ ಹಾಲನ್ನವರ, ಭೀಮಸಿ ಬಾರಕೇರ, ಬಸಪ್ಪ ಅಂಬಿಗೇರ, ಹನುಮಂತ ಅಂಬಿಗೇರ ಆಗಮಿಸಿದ್ದರು. ಅಂಬಿಗರ ಚೌಡಯ್ಯ ಮತ್ತು ಗಂಗಾಪರಮೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಂಸ್ಥೆಯ ಅಧ್ಯಕ್ಷ ಬಾಳಪ್ಪ ಮಾತನಾಡಿ, ಸಮಾಜ ಹಿಂದುಳಿದಿದ್ದು, ಅಭಿವೃದ್ಧಿಗಾಗಿ ನಾವೆಲ್ಲ ಒಂದಾಗಬೇಕಿದೆ, ಪರಸ್ಪರ ಸಹಕಾರ ನೀಡಬೇಕಿದೆ. ಇಂತಹ ಸಂಸ್ಥೆಗಳ ಮೂಲಕ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದೋಣ ಎಂದರು. ಎಸ್.ಬಿ. ಅಂಬಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮಾ ಹೊಟ್ಟಿ ಪ್ರಾರ್ಥಿಸಿದರು. ಎಸ್.ಎಂ. ಅಂಬಿಗೇರ ಸ್ವಾಗತಿಸಿದರು. ಬಿ.ಬಿ. ಕಮ್ಮಾರ ವಂದಿಸಿದರು. ಪರಸು ಓಲೇಕಾರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement