ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉದ್ಯಮಶೀಲತೆ ಬೆಳೆಯಲಿ: ಎಚ್.ಕೆ. ಪಾಟೀಲ

Vishwanath S
Updated On : 15 Aug 2013, 11:22 am

ಕನ್ನಡಪ್ರಭ ವಾರ್ತೆ, ಗದಗ, ಆ. 14
ವಿಧಾಯಕ ಉದ್ದೇಶ ಹಾಗೂ ಕಾರ್ಯಸಾಧನೆಗಳೊಂದಿಗೆ ಉದ್ಯಮಶೀಲತೆ ಕೂಡ ಬೆಳೆದು ಬರಬೇಕು. ವ್ಯಕ್ತಿಗತ ಸಮಾಜ ಬೆಳೆದಾಗಲೇ ಸಮಷ್ಟಿಗೆ ಅದರಿಂದ ಉಪಯುಕ್ತವಾಗುವುದು ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಬುಧವಾರ ಗದಗ-ಲಕ್ಕುಂಡಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಲಾಗಿರುವ ಶ್ರೀ ಸಾಯಿನಾಥ ಪೆಟ್ರೋಲ್ ಬಂಕ್ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಚೇಗರಡ್ಡಿ, ಜಿಲ್ಲಾ ಡಿಎಸ್‌ಎಸ್ ಆಧ್ಯಕ್ಷ ಎಸ್.ಎನ್. ಬಳ್ಳಾರಿ, ಉಳವೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಣ್ಣ ಹೂವಣ್ಣವರ, ರಾಮಕೃಷ್ಣ ಪಾಂಡ್ರೆ, ನಗರಸಭೆ ಮಾಜಿ ಆಧ್ಯಕ್ಷ ಶಿವಣ್ಣ ಮುಳಗುಂದ, ಸದಸ್ಯ ಬಿ.ಬಿ. ಅಸೂಟಿ, ಕೆ.ಐ. ಶೇಖ, ಶ್ರೀನಿವಾಸ ಹುಯಿಲಗೋಳ, ಮಂಜುನಾಥ ಪೂಜಾರ, ಭರತ ಇರಾಳ, ಸತೀಶ ಹೂಲಿ, ಸಿ.ಕೆ. ಮಾಳಶೆಟ್ಟಿ, ಗೋಪಾಲ ಹೊಸಮನಿ ಮುಂತಾದವರು ಇದ್ದರು. ನಗರಸಭೆ ಮಾಜಿ ಅಧ್ಯಕ್ಷ ಎಲ್.ಡಿ. ಚಂದಾವರಿ ಸ್ವಾಗತಿಸಿದರು. ಅಂದಾನೆಪ್ಪ ವಿಭೂತಿ ನಿರೂಪಿಸಿದರು. ಸಾಯಿನಾಥ ಟ್ರೇಡಿಂಗ್ ಕಂಪನಿ ವ್ಯವಸ್ಥಾಪಕ ಗಣೇಶ ಚಂದಾವರಿ ವಂದಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement